ಕರ್ನಾಟಕ

karnataka

ETV Bharat / state

ಬೆಳಗಾವಿ ಜಿಲ್ಲೆಯಲ್ಲಿ ಪೆಟ್ರೋಲ್ ಡೀಸೆಲ್​ಗಾಗಿ ಬೈಕ್ ಸವಾರರ ಪರದಾಟ.. - Petrol- Diesel

ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹಕ್ಕೊಳಗಾದ ನದಿ ತೀರದ ಗ್ರಾಮಸ್ಥರ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಲ್ಲದೆ ಜನರು ಪರದಾಡುವಂತಾಗಿದೆ.

ಬೈಕ್ ಸವಾರರ ಪರದಾಟ

By

Published : Aug 9, 2019, 8:28 AM IST

ಚಿಕ್ಕೋಡಿ : ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಉತ್ತರ ಕರ್ನಾಟಕ ಭಾಗಶಃ ತತ್ತರಿಸಿದ್ದು, ವಾಹನ ಸವಾರರು ಪೆಟ್ರೋಲ್-ಡೀಸೆಲ್ ಇಲ್ಲದೆ ಪರದಾಡುವ ಪರಿಸ್ಥಿತಿ‌ ನಿರ್ಮಾಣವಾಗಿದೆ.

ಪೆಟ್ರೋಲ್ ಡೀಸೆಲ್​ಗಾಗಿ ಜನರ ಪರದಾಟ..

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದ ಸಂಕೇಶ್ವರ, ಹುಕ್ಕೇರಿ, ರಾಯಬಾಗ, ಅಥಣಿ, ಕಾಗವಾಡ ತಾಲೂಕುಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಕಡೆಗಳಲ್ಲಿ ಪೆಟ್ರೋಲ್ ಸಿಗದೆ ಜನರು ಪರದಾಡುವಂತಾಗಿದೆ.

ಈಗಾಗಲೇ 15ಕ್ಕೂ ಹೆಚ್ಚು ಸೇತುವೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಮತ್ತೊಂದು ಊರಿಗೆ ಹೋಗಬೇಕಾದರೆ ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ಶೇಖರಣೆಯ ಸ್ಥಳಗಳು ಒಂದು ಕಡೆಯಾದರೆ ಪೆಟ್ರೋಲ್ ಮಾರಾಟ ಮಾಡುವ ಏಜೆನ್ಸಿಗಳು ಒಂದು ಕಡೆ ಇವೆ. ಹೀಗಾಗಿ ಪೆಟ್ರೋಲ್ ಸಮರ್ಪಕವಾಗಿ ಪೂರೈಕೆ ಮಾಡಬೇಕಾದರೆ ಸಂಪರ್ಕ ಸೇತುವೆಗಳು ಬಂದ್​ ಆಗಿದ್ದರಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಇದರಿಂದ ಕೆಲ ಬಂಕ್‌ಗಳಲ್ಲಿ ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್ ಸಿಗುವ ಬಂಕ್‌ಗಳ ಮುಂದೆ ನೂರಾರು ಬೈಕ್ ಸವಾರರು ಪೆಟ್ರೋಲ್ ಹಾಕಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

...view details