ಕರ್ನಾಟಕ

karnataka

ETV Bharat / state

ಅನೈತಿಕ ಸಂಬಂಧ ಆರೋಪ: ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ - ಕೊಲೆ

ಅನೈತಿಕ ಸಂಬಂಧ ಆರೋಪದ ಮೇಲೆ ವ್ಯಕ್ತಿಯೊಬ್ಬನ ಕೊಚ್ಚಿ ಕೊಂದಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

person killed    for  illegal affair
ಅನೈತಿಕ ಸಂಬಂಧ ಆರೋಪಕ್ಕೆ ವ್ಯಕ್ತಿ ಕೊಲೆ

By

Published : Apr 2, 2020, 4:19 PM IST

ಚಿಕ್ಕೋಡಿ: ಅನೈತಿಕ ಸಂಬಂಧ ಆರೋಪದ ಮೇಲೆ ಓರ್ವನನ್ನು ಕುಡಗೋಲಿನಿಂದ ಬರ್ಬರ ಹತ್ಯೆ‌ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ನಡೆದಿದೆ.

ವ್ಯಕ್ತಿಯ ಕೊಲೆ

ನರಸಿಂಗಪುರ ಗ್ರಾಮದ 27 ವರ್ಷ ವಯಸ್ಸಿನ ಬೀರಪ್ಪ ವಿಠಲ ಕಮಸಿ ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕೊಲೆ ಆರೋಪದಲ್ಲಿ ಅದೇ ಗ್ರಾಮದ ಆರೋಪಿಗಳಾದ ಬೀರಪ್ಪ ದುಂಡಪ್ಪಾ ಬಡಾಯಿ (35), ಸತ್ತೆಪ್ಪಾ ಸಿದ್ದಪ್ಪಾ ಬಡಾಯಿ(25) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿಗಳ ಕುಟುಂಬದ ಸದಸ್ಯೆಯೊಬ್ಬಳ ಜೊತೆ ಬೀರಪ್ಪ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದ್ದು, ಯಮಕನಮರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details