ಚಿಕ್ಕೋಡಿ:ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರೆದ ಭಾರಿ ಪ್ರಮಾಣದ ಮಳೆಯಿಂದಾಗಿ ಉತ್ತರ ಕರ್ನಾಟಕದ ಕೆಲವೆಡೆ ನದಿಗೆ ಹೋಗದಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.
ತುಂಬಿ ಹರಿಯುತ್ತಿರುವ ನದಿಗಳು... ಅಧಿಕಾರಿಗಳ ಸೂಚನೆ ಪಾಲಿಸದ ಜನ! - ಅಪಾಯದ ಮಟ್ಟ ಮೀರಿದ ಕೃಷ್ಣಾ ನದಿ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ನದಿಗೆ ಹೋಗದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ವಾರ್ನಿಂಗ್ ಮಾಡಿದ್ದರೂ ಸಹ ಸಾರ್ವಜನಿಕರು ಮಾತ್ರ ಏನೂ ತಿಳಿಯದಂತಿದ್ದಾರೆ.

ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ ಸಂಚರಿಸುತ್ತಿರುವ ಸಾರ್ವಜನಿಕರು
ತುಂಬಿ ಹರಿಯುತ್ತಿರುವ ನದಿಗಳು
ವೇದಗಂಗಾ, ಧೂಧಗಂಗಾ, ಕೃಷ್ಣಾ ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಬೋಜ-ಕಾರದಗಾ ಸೇತುವೆ ತುಂಬಿ ಹರಿಯುತ್ತಿವೆ. ಆದರೆ ಸೇತುವೆಗಳ ಮೇಲೆ ಜೀವದ ಹಂಗು ತೊರೆದು ಸಾರ್ವಜನಿಕರು ಸಂಚರಿಸುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳು ನದಿ ತೀರದ ಕಡೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಸಹ ಎಚ್ಚರಿಕೆಯ ಸಂದೇಶಕ್ಕೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಜನರಲ್ಲಿ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಈ ತರಹದ ತಪ್ಪು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಕೆಲ ಸ್ಥಳೀಯರ ಪ್ರಶ್ನೆಯಾಗಿದೆ.