ಬೆಳಗಾವಿ:ಕೊರೊನಾ ಹೊಡೆತದಿಂದ ರಾಜ್ಯದ ಜನತೆ ಮೊದಲೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ನೈಟ್ ಕರ್ಫ್ಯೂ ಜಾರಿ ಬೇಡವಾಗಿತ್ತು ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಜನರು ಸಂಕಷ್ಟದಲ್ಲಿದ್ದಾರೆ, ನೈಟ್ ಕರ್ಪ್ಯೂ ಬೇಡವಾಗಿತ್ತು: ಮಾಜಿ ಶಾಸಕ ಕೋನರೆಡ್ಡಿ - night-curfew-was-not-needed
ಜನರು ಮುಂಜಾಗ್ರತೆ ವಹಿಸುವುದನ್ನು ಕಲಿತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ನಿಂದ ಎಲ್ಲ ಉದ್ಯಮಗಳು ಸಂಕಷ್ಟದಲ್ಲಿವೆ. ಹೀಗಾಗಿ ನೈಟ್ ಕರ್ಫ್ಯೂ ಜಾರಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಶಾಸಕ ಕೋನರೆಡ್ಡಿ ಹೇಳಿದರು.
![ಜನರು ಸಂಕಷ್ಟದಲ್ಲಿದ್ದಾರೆ, ನೈಟ್ ಕರ್ಪ್ಯೂ ಬೇಡವಾಗಿತ್ತು: ಮಾಜಿ ಶಾಸಕ ಕೋನರೆಡ್ಡಿ ಕೋನರೆಡ್ಡಿ](https://etvbharatimages.akamaized.net/etvbharat/prod-images/768-512-9980863-thumbnail-3x2-hjkhj.jpg)
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಜನರು ಮುಂಜಾಗ್ರತೆ ವಹಿಸುವುದನ್ನು ಕಲಿತಿದ್ದಾರೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ನಿಂದ ಎಲ್ಲ ಉದ್ಯಮಗಳು ಸಂಕಷ್ಟದಲ್ಲಿವೆ. ಗೂಡ್ಸ್ ವಾಹನ, ಟ್ಯಾಕ್ಸಿ, ಹೋಟೆಲ್ ಉದ್ಯಮದವರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನೈಟ್ ಕರ್ಫ್ಯೂ ಜಾರಿ ಮಾಡುವ ಅವಶ್ಯಕತೆ ಇರಲಿಲ್ಲ ಎಂದರು.
ಲಾಕ್‌ಡೌನ್, ನೈಟ್ ಕರ್ಫ್ಯೂ ಜಾರಿ ಸೇರಿ ಎಲ್ಲ ವಿಚಾರದಲ್ಲಿ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಕಡೇಪಕ್ಷ ಬೆಂಗಳೂರಿನಲ್ಲಿರುವ ಎಲ್ಲ ಪಕ್ಷದ ಶಾಸಕರನ್ನು ಕರೆದು ಮಾತನಾಡಿಸಬೇಕಿತ್ತು. ಬ್ರಿಟನ್‌ನಿಂದ ಈಗಾಗಲೇ ಅಷ್ಟು ಜನ, ಇಷ್ಟು ಜನ ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿಂದ ಬಂದವರನ್ನು ದೆಹಲಿಯಲ್ಲೇ ತಡಿಯಬೇಕಿತ್ತು. ಅಲ್ಲೇ ಕ್ವಾರಂಟೈನ್ ಮಾಡಬೇಕಿತ್ತು. ಇವರಿಗೆ ಮೊದಲೇ ಮಾಹಿತಿ ಇರಲಿಲ್ವಾ? ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾವನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.