ಚಿಕ್ಕೋಡಿ: ಈ ಬಾರಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಗಣೇಶ ಮಂಡಳಿಗಳ ಪರವಾಗಿ ನಿಪ್ಪಾಣಿ ಪಿಎಸ್ಐ ಅನಿಲ ಕುಂಬಾರ ಅವರಿಗೆ ಮಂಡಳಿ ಸದಸ್ಯರು ಮನವಿ ಸಲ್ಲಿಸಿದರು.
ನಿಪ್ಪಾಣಿಯಲ್ಲಿ ಸರಳವಾಗಿ ಗಣೇಶ ಉತ್ಸವ ಆಚರಿಸಲು ನಿರ್ಣಯ
ತಾಲೂಕಿನ ಎಲ್ಲಾ ಗಣೇಶ ಮಂಡಳಿಗಳ ಸದಸ್ಯರು ನಿಪ್ಪಾಣಿ ಪೊಲೀಸ್ ಠಾಣೆಗೆ ಬಂದು ಮನವಿ ಸಲ್ಲಿಸಿದ್ದು, ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ಗಣೇಶ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಗಣೇಶ ಮೂರ್ತಿ ಕೂರಿಸಲು ನಮಗೆ ಅನುಮತಿ ನೀಡಬೇಕು..
ಮಹಾರಾಷ್ಟ್ರದ ಗಡಿಯ ನಿಪ್ಪಾಣಿ ತಾಲೂಕಿನಲ್ಲಿ ಮಹಾರಾಷ್ಟ್ರದ ಮಾದರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷವೂ ಕೂಡಾ ಗಣೇಶ ಉತ್ಸವವನ್ನು ಆಚರಿಸಲು ತಯಾರಿ ನಡೆಸಲಾಗಿದೆ. ಈ ಬಾರಿ ಗಣೇಶ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಗಣೇಶ ಮಂಡಳಿಗಳ ಸದಸ್ಯರು ತಿಳಿಸಿದ್ದಾರೆ.
ನಿಪ್ಪಾಣಿ ತಾಲೂಕಿನ ಎಲ್ಲಾ ಗಣೇಶ ಮಂಡಳಿಗಳ ಸದಸ್ಯರು ನಿಪ್ಪಾಣಿ ಪೊಲೀಸ್ ಠಾಣೆಗೆ ಬಂದು ಮನವಿ ಸಲ್ಲಿಸಿದ್ದು, ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ಗಣೇಶ ಉತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಗಣೇಶ ಮೂರ್ತಿ ಕೂರಿಸಲು ನಮಗೆ ಅನುಮತಿ ನೀಡಬೇಕು. ಕಳೆದ ಬಾರಿ ಪುರಸಭೆ, ಪೊಲೀಸ್ ಹಾಗೂ ಕೆಇಬಿ ಪರವಾನಿಗೆ ನೀಡಲು ತುಂಬಾ ತೊಂದರೆ ನೀಡಿವೆ. ಈ ಬಾರಿ ತೊಂದರೆಯಾಗದಂತೆ ಒಂದೇ ಸ್ಥಳದಲ್ಲಿ ಎಲ್ಲಾ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ವ್ಯವಸ್ಥೆ ಮಾಡಿಕೊಡಿ ಎಂದು ಮಂಡಳಿಗಳ ಸದಸ್ಯರು ಮನವಿ ಮಾಡಿದ್ದಾರೆ.