ಚಿಕ್ಕೋಡಿ: ಕಳೆದ ಒಂದು ವಾರದಿಂದ ಪ್ರವಾಹದಲ್ಲಿ ಸಿಲುಕಿರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೀರಡಿ ಗ್ರಾಮಸ್ಥರನ್ನು ಶಾಸಕ ದುರ್ಯೋಧನ ಐಹೊಳೆ ಭೇಟಿಯಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಪರೂಪಕ್ಕೆ ಭೇಟಿ ನೀಡಿದ ಶಾಸಕ ದುರ್ಯೋಧನ: ಬೀರಡಿ ಗ್ರಾಮಸ್ಥರಿಂದ ತರಾಟೆ - beeradi village people outrage against Mla Duryodhana ihole
ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಬೀರಡಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ದುರ್ಯೋಧನ ಐಹೊಳೆ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಶಾಸಕ ದುರ್ಯೋಧನ ಐಹೊಳೆಗೆ ತರಾಟೆಗೆ ತೆಗೆದುಕೊಂಡ ಬೀರಡಿ ಗ್ರಾಮಸ್ಥರು
ಕಳೆದ ಬಾರಿ ಪರಿಹಾರ ಸಿಗಲಿಲ್ಲ. ಈ ಬಾರಿಯಾದರೂ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಟಾಚಾರಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದೀರಾ?. ಏನಾದರೂ ಕೆಲಸ ಇದ್ದರೆ ಅಧಿಕಾರಿ ಹಾಗೂ ನಿಮ್ಮ ಪುತ್ರ ಬರುತ್ತಾರೆ. ನೀವೇಕೆ ನಮ್ಮ ಗ್ರಾಮಕ್ಕೆ ಬರುವುದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಕಲಬುರಗಿ ಪಬ್ಲಿಕ್ ಪಾರ್ಕ್ನಲ್ಲಿ ಮೊಬೈಲ್ ಕಳವು: ಪರಾರಿಯಾಗಲು ಯತ್ನ, ಬಾವಿಗೆ ಬಿದ್ದು ಆರೋಪಿ ಸಾವು
TAGGED:
ಶಾಸಕ ದುರ್ಯೋಧನ ಐಹೊಳೆಗೆ ತರಾಟೆ