ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ ಕಡಿಮೆಯಾಗಿರುವ ಹಿನ್ನೆಲೆ ಕೃಷ್ಣಾ ನದಿ ಪ್ರವಾಹದಲ್ಲೂ ಇಳಿಕೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕೃಷ್ಣಾ ನದಿ ಹರಿವಿನಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ನದಿ ಪಾತ್ರದ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ನಿರಾಳರಾದ ಕೃಷ್ಣಾ ನದಿ ತೀರದ ಜನತೆ - River Dudhganga
ಕಳೆದ 15 ದಿನಗಳಿಂದ ಪ್ರವಾಹ ಭೀತಿ ಎದುರಿಸುತ್ತಿದ್ದ ಬೆಳಗಾವಿ ಸುತ್ತಲಿನ ಪ್ರದೇಶದಲ್ಲಿ ಪ್ರವಾಹ ಮಟ್ಟ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಪ್ರಮುಖವಾಗಿ ಕೃಷ್ಣಾ ನದಿಯ ಹೊರಹರಿವಿನಲ್ಲಿ ಇಳಿಮುಖವಾಗಿದ್ದು, ಪ್ರವಾಹದಿಂದ ಮುಳುಗಿದ್ದ ಹಲವು ಸೇತುವೆಗಳು ವಿಮುಕ್ತಿ ಪಡೆದಿವೆ.
ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆ: ಪ್ರವಾಹದಿಂದ ನಿರಾಳರಾದ ಕೃಷ್ಣಾ ನದಿ ತೀರದ ಜನತೆ
ಅಲ್ಲದೇ ಪ್ರವಾಹದಿಂದಾಗಿ ಇಲ್ಲನ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ಪ್ರವಾಹದಿಂದ ಜಲಾವೃತಗೊಂಡ ಹನ್ನೊಂದು ಸೇತುವೆಗಳ ಪೈಕಿ 9 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ದೂಧಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ - ದತ್ತವಾಡ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲೋಳ - ಯಡೂರು ಎರಡೂ ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.
ಕೃಷ್ಣಾ ನದಿ ಪ್ರವಾಹ ಹಂತ -ಹಂತವಾಗಿ ಇಳಿಮುಖವಾಗುತ್ತಿರುವುದರಿಂದ ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಕಾಗವಾಡ ತಾಲೂಕಿನ ನದಿ ತೀರದ ಜನತೆ ನಿರಾಳರಾಗಿದ್ದಾರೆ.