ಬೆಳಗಾವಿ: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ನಗರದ ಎಲ್ಲ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರೂ ತರಕಾರಿ ಖರೀದಿಗೆ ಜನರು ಮುಗಿಬಿದ್ದಿರುವ ಘಟನರ ನಗರದ ಗಣಮಪತಿ ಗಲ್ಲಿಯಲ್ಲಿ ನಡೆದಿದೆ.
ಕುಂದಾನಗರಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾರುಕಟ್ಟೆಯಲ್ಲಿ ಮುಗಿಬಿದ್ದ ಜನ
ನಗರದ ಗಣಪತಿ ಗಲ್ಲಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನರು ಮುಗಿಬಿದ್ದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತರಕಾರಿ ಮಾರಾಟ ನಡೆಸಲಾಗಿದೆ.
ನಗರದ ಗಣಪತಿ ಗಲ್ಲಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನರು ಮುಗಿಬಿದ್ದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ತರಕಾರಿ ಮಾರಾಟ ನಡೆಸಲಾಗಿದೆ. ಗುಂಪುಗುಂಪಾಗಿ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡುತ್ತಿದ್ದು, ಯಾವುದೇ ರೀತಿ ಮಾರ್ಕಿಂಗ್ ಹಾಕದೇ ಬೇಕಾಬಿಟ್ಟಿ ವ್ಯವಹಾರ ನಡೆಯುತ್ತಿರುವುದು ಕಂಡುಬಂದಿದೆ.
ಇನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ಕೂಡ ವ್ಯವಸ್ಥೆ ಮಾಡಿಲ್ಲ. ಮನೆಬಾಗಿಲಿಗೆ ತರಕಾರಿ ಪೂರೈಸಲು ನಿನ್ನೆಯಷ್ಟೇ ದಿನಸಿ, ತರಕಾರಿ ವ್ಯಾಪಾರಸ್ಥರ ಜತೆಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ಆದರೂ ಬೆಳಗಾವಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಜನರನ್ನು ಚದುರಿಸುವ ಕಾರ್ಯ ಪೊಲೀಸರು ಮಾಡಿಲ್ಲ ಜೊತೆಗೆ ಪಾಲಿಕೆ ಸಿಬ್ಬಂದಿ ನಿಯೋಜನೆ ಕೂಡ ಮಾಡಲಾಗಿಲ್ಲವೆಂಬ ಆರೋಪ ಕೇಳಿ ಬಂದಿದೆ.