ಬೆಳಗಾವಿ: ಲಾಕ್‌ಡೌನ್ ಕೊಂಚ ಸಡಿಲಿಕೆ ಮಾಡಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಹಣ ಪಡೆದುಕೊಳ್ಳಲು ನಗರದ ಎಸ್‌ಬಿಐ ಬ್ಯಾಂಕ್ ಮುಂದೆ ಸಾಮಾಜಿಕ ಅಂತರ ಪಾಲಿಸದೇ ಜನರು ಗುಂಪು ಗುಂಪಾಗಿ ನಿಂತಿದ್ದರು.
ಸಾಮಾಜಿಕ ಅಂತರ ಮರೆತ ಬೆಳಗಾವಿ ಮಂದಿ: ಹಣ ಪಡೆಯಲು ಬ್ಯಾಂಕ್ ಮಂದೆ ಸರದಿ ಸಾಲು - belgavi latest news
ಬೆಳಗಾವಿ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಮುಂದೆ ಜನರು ಹಣ ತೆಗೆದುಕೊಳ್ಳಲು ಸಾಮಾಜಿಕ ಅಂತರ ಮರೆತು ಮುಗಿಬಿದ್ದರು.
ಸಾಮಾಜಿಕ ಅಂತರ ಮರೆತ ಬೆಳಗಾವಿ ಮಂದಿ
ಪಟ್ಟಣದ ಬಸ್ ನಿಲ್ದಾಣದ ಎದುರಿನ ಎಸ್‌ಬಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಮುಂದೆ ಜನರು ಜಮಾಯಿಸಿದ್ದರು. ಕಳೆದ 40 ದಿನಗಳಿಂದ ಸ್ತಬ್ಧವಾಗಿದ್ದ ನಗರ ಇಂದು ಜನರಿಂದ ತುಂಬಿ ಹೋಗಿತ್ತು. ಹಾಗಾಗಿ, ಲಾಕ್‌ಡೌನ್ ಸಡಿಲಿಕೆ ಮಾಡಿರುವ ನಿರ್ಧಾರ ಕೆಲವರಿಗೆ ಖುಷಿ ಕೊಟ್ಟರೆ, ಇನ್ನು ಕೆಲವರಲ್ಲಿ ಭೀತಿ ಹುಟ್ಟಿಸಿದೆ.