ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೊನಾ: ಸ್ವಯಂ ಪ್ರೇರಿತ ಲಾಕ್‌ಡೌನ್​ಗೆ ಚಿಕ್ಕೋಡಿ ಸಿದ್ಧತೆ

ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ತನ್ನ ಕರಿ ನೆರಳನ್ನು ವ್ಯಾಪಿಸುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕನ್ನು ಒಂದು ವಾರ ಸಂಪೂರ್ಣ ಬಂದ್​​​ ಮಾಡಲು ನಾಗರಿಕರು ನಿರ್ಧರಿಸಿದ್ದಾರೆ.

people in chikkodi took into self lockdown
ಚಿಕ್ಕೋಡಿ

By

Published : Jul 12, 2020, 7:16 PM IST

ಚಿಕ್ಕೋಡಿ:ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ತಾಲೂಕನ್ನು ಒಂದು ವಾರ ಸಂಪೂರ್ಣ ಬಂದ್​​​ ಮಾಡಲು ನಾಗರಿಕರು ನಿರ್ಧರಿಸಿದ್ದಾರೆ.

ಪುರಸಭೆ ಚಿಕ್ಕೋಡಿ ಪ್ರಕಟಣೆ
ಈಗಾಗಲೇ ಪಕ್ಕದ ಇಚಲಕರಂಜಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ತಾಲೂಕಿನ ನಾಗರಿಕರು ಸ್ವಯಂ ಪ್ರೇರಿತರಾಗಿ ಲಾಕ್​ಡೌನ್​​ ಮಾಡಲು ಮುಂದಾಗಿದ್ದಾರೆ. ಅವಶ್ಯಕ ವಸ್ತುಗಳಾದ ಔಷಧಿ ಅಂಗಡಿಗಳು, ಆಸ್ಪತ್ರೆಗಳು ಬಾಗಿಲು ತೆರೆಯಲಿದ್ದು, ಹಾಲು -ತರಕಾರಿ ಮಾರಾಟಗಾರರು ಮನೆ ಮನೆಗೆ ತೆರಳಿ ಮಾರಾಟ ಮಾಡುವಂತೆ ಪುರಸಭೆ ಸೂಚಿಸಿದೆ. ಅಲ್ಲದೇ ತಾಲೂಕಿನಲ್ಲಿ ಒಂದು ವಾರದವರೆಗೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯುವುದಿಲ್ಲ ಎಂದು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details