ಚಿಕ್ಕೋಡಿ:ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಮಾವಿನ ಹಣ್ಣುಗಳು ಬರುತ್ತಿದ್ದರೂ ಕೊರೊನಾ ಭೀತಿಯಿಂದ ಜನ ಖರೀದಿ ಮಾಡಲು ಮುಂದಾಗುತ್ತಿಲ್ಲ.
ಕೊರನಾ ಭೀತಿಯಲ್ಲಿ ಗ್ರಾಹಕರು: ವ್ಯಾಪಾರಸ್ಥರಿಗೆ ಕಹಿಯಾದ ಮಾವು! - fear of corona
ಕಳೆದ ವರ್ಷದಲ್ಲಿ ಪ್ರತೀ ದಿನ 20-25 ಡಜನ್ ಮಾವಿನ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಈ ಬಾರಿ ಸಾಕಷ್ಟು ಹಿನ್ನಡೆಯಾಗಿದೆ. ಮಾವಿನ ಹಣ್ಣುಗಳು ಮಾರಾಟವಾಗದೆ ಗೋದಾಮಿನಲ್ಲಿ ಕೊಳೆಯುತ್ತಿವೆ.
ಲಾಕಡೌನ್ನಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ಕಾಲ ಕಳೆದ ವ್ಯಾಪಾರಸ್ಥರಿಗೆ ಇನ್ನೇನು ಲಾಕಡೌನ್ ಸಡಿಲಿಕೆ ನೆಮ್ಮದಿ ನೀಡಿದರೂ ಹಣ್ಣಿಗೆ ಸಮರ್ಪಕ ಗ್ರಾಹಕರಿಲ್ಲದೆ ಕಂಗಾಲಾಗಿದ್ದಾರೆ. ಕಳೆದ ವರ್ಷ ಪ್ರತೀ ದಿನ 20-25 ಡಜನ್ ಮಾವಿನ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಈ ಬಾರಿ ಸಾಕಷ್ಟು ಹಿನ್ನಡೆಯಾಗಿದೆ. ಮಾವಿನ ಹಣ್ಣುಗಳು ಮಾರಾಟವಾಗದೆ ಗೋದಾಮಿನಲ್ಲಿ ಕೊಳೆಯುತ್ತಿವೆ.
ಸದ್ಯ ಚಿಕ್ಕೋಡಿಯಲ್ಲಿ ದೇವಗಡ, ರತ್ನಾಗಿರಿ, ಹಪುಸ, ಗೋವಾ, ದೇಶಿಯ ಮಾವುಗಳು ಸೇರಿದಂತೆ ಮುಂತಾದ ಹಲವು ಜಾತಿಯ ಹಣ್ಣುಗಳು ಲಭ್ಯವಾಗುತ್ತಿವೆ. ಆದರೆ ಗ್ರಾಹಕರು ಮಾತ್ರ ಮಾವಿನ ಹಣ್ಣುಗಳತ್ತ ಸುಳಿಯುತ್ತಿಲ್ಲ. ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಮಾತ್ರ ಖರೀದಿಸುತ್ತಿದ್ದಾರೆ. ಇದರಿಂದ ಮಾವಿನ ಹಣ್ಣಿನ ವ್ಯಾಪಾರಸ್ಥರು ಸಂಪಾದನೆಯಿಲ್ಲದೆ ಖಾಲಿ ಕೈಗಳಿಂದ ವಾಪಸಾಗುತ್ತಿದ್ದಾರೆ.