ಬೆಳಗಾವಿ: 40 ದಿನಗಳ ಬಳಿಕ ಇಂದಿನಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಆಗುತ್ತಿವೆ. ಇದರಿಂದ ಸಂಭ್ರಮದಲ್ಲಿರುವ ಮದ್ಯಪ್ರಿಯರು ವೈನ್ ಶಾಪ್ ಮುಂದೆ ಪಟಾಕಿ ಸಿಡಿಸಿದ ಘಟನೆ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ.
ಘಟಪ್ರಭಾದ ವಿಷ್ಣು ವೈನ್ ಶಾಪ್ ಎದುರು ಮದ್ಯಪ್ರಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ವೈನ್ ಶಾಪ್ ಮಾಲೀಕರು ಬರುವ ಮುಂಚೆಯೇ ಮದ್ಯದಂಗಡಿ ಮುಂದೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ರು. ಮಾಲೀಕರು ಬರುತ್ತಿದ್ದಂತೆ ಮದ್ಯಪ್ರಿಯರು ಪಟಾಕಿ ಸಿಡಿಸಿದರು. ಮದ್ಯ ಖರೀದಿಗೆ ನೂರಾರು ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ.
ಚೀಲ ಇಟ್ಟು ನಂಬರ್ ಹಚ್ಚಿದ ಮದ್ಯಪ್ರಿಯರು:
ಬೆಳಗ್ಗೆ 9 ಗಂಟೆಯಿಂದ ಮದ್ಯ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ವೈನ್‌ಶಾಪ್ ಎದುರು ಚೀಲಗಳದ್ದೇ ದರ್ಬಾರ್ ಆಗಿದೆ. ಬೆಳಗಾವಿ ನಗರದ ಆರ್‌ಪಿಡಿ ವೃತ್ತದ ಲಿಕ್ಕರ್ ಟೌನ್ ಮಳಿಗೆ ಎದುರು ಸೋಷಿಯಲ್ ಡಿಸ್ಟನ್ಸ್ ಮಾರ್ಕಿಂಗ್‌ನಲ್ಲಿ ಬ್ಯಾಗ್ಳನ್ನಿಟ್ಟು ಮದ್ಯಪ್ರಿಯರು ದೂರ ನಿಂತಿದ್ದಾರೆ.