ಕರ್ನಾಟಕ

karnataka

ETV Bharat / state

ಸರ್ಕಾರದ ದೇಣಿಗೆ ಸಂಗ್ರಹ ವಿರುದ್ದ ವಾಟ್ಸ್​ಆ್ಯಪ್​ ನಲ್ಲಿ ಸಾರ್ವಜನಿಕರ ಆಕ್ರೋಶ - People barrage against of government donations

ಕಾರ್ಯನಿರತ ಪೊಲೀಸ್, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ‌ ಮತ್ತು ಪತ್ರಕರ್ತರ ಸುರಕ್ಷತೆ ಒದಗಿಸಲು ಆಗ್ರಹಿಸಿ ಸರ್ಕಾರದ ದೇಣಿಗೆ ಸಂಗ್ರಹ ವಿರುದ್ದ ಸಾರ್ವಜನಿಕರು ಸಮರ ಸಾರಿದ್ದಾರೆ.

People barrage against of government
ವಾಟ್ಸಪ್ ಮೂಲಕ ವಾಗ್ದಾಳಿ

By

Published : Mar 26, 2020, 5:28 PM IST

ಚಿಕ್ಕೋಡಿ : ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಕಾರ್ಯನಿರತ ಪೊಲೀಸ್, ಪೌರ ಕಾರ್ಮಿಕರು, ವೈದ್ಯಕೀಯ ಸಿಬ್ಬಂದಿ‌ ಮತ್ತು ಪತ್ರಕರ್ತರ ಸುರಕ್ಷತೆ ಒದಗಿಸಲು ಆಗ್ರಹಿಸಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ದೇಣಿಗೆ ಸಂಗ್ರಹದ ವಿರುದ್ದ ಸಾರ್ವಜನಿಕರು ಸಮರ ಸಾರಿದ್ದಾರೆ.

ಸರ್ಕಾರದ ದೇಣಿಗೆ ಸಂಗ್ರಹ ವಿರುದ್ದ ಸಾರ್ವಜನಿಕರು ವಾಗ್ಧಾಳಿ

ಬೆಳಗಾವಿ‌ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಜನರ ಧ್ವನಿ ವಾಟ್ಸ್​​ಆ್ಯಪ್​​ ​ ಗ್ರೂಪ್​ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, ಶಾಸಕರ ಕುದುರೆ ವ್ಯಾಪಾರಕ್ಕೆ ಹಣ ಬರುತ್ತೆ. ಆದರೆ ಸಾರ್ವಜನಿಕರ ರಕ್ಷಣೆಗೆ ಹಣ ಇಲ್ಲ. ತೆರಿಗೆ ಸಂಗ್ರಹ ಮಾಡಿದ ಹಣ ಎಲ್ಲಿ ಹೋಯಿತು ಎಂದು ವಾಟ್ಸ್​ಆ್ಯಪ್​ ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ABOUT THE AUTHOR

...view details