ಕರ್ನಾಟಕ

karnataka

ETV Bharat / state

ಮತದಾರರು ಗೊಂದಲದಲ್ಲಿದ್ದಾರೆ : ಗೋಕಾಕ್​​ನಲ್ಲಿ ಗುಪ್ತ ಮತದಾರರೇ ನಿರ್ಣಾಯಕ ಎಂದ ಸತೀಶ್​​​ - By election 2019

ಈ ವಿಧಾನಸಭಾ ಉಪಚುನಾವಣೆಯಲ್ಲಿ ಗೋಕಾಕ್​ ಕ್ಷೇತ್ರದಲ್ಲಿ ಮೂವರೂ ಸಹ ಪ್ರಬಲ ಅಭ್ಯರ್ಥಿಗಳಾಗಿದ್ದು, ಯಾರಿಗೆ ಮತ ಹಾಕುವುದು ಎಂದು ಜನರೇ ಗೊಂದಲಕ್ಕೀಡಾಗಿದ್ದಾರೆ ಎಂದು ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ.

Satish Jarakiholi
ಸತೀಶ್ ಜಾರಕಿಹೊಳಿ‌

By

Published : Nov 30, 2019, 1:53 PM IST

ಗೋಕಾಕ:ಡಿಸೆಂಬರ್ 5ರಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೂವರು ಪ್ರಬಲ ಸ್ಪರ್ಧಿಗಳಿದ್ದು, ಯಾರಿಗೆ ಮತ ಹಾಕಬೇಕೆಂದು ಜನ ಗೊಂದಲದಲ್ಲಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದರು.‌

ಗೋಕಾಕಿನಲ್ಲಿ ಮಾತನಾಡಿದ ಅವರು, ಗೋಕಾಕ್ ಕ್ಷೇತ್ರದಲ್ಲಿ ಶೇ 30ರಷ್ಟು ಗುಪ್ತ ಮತದಾರರಿದ್ದಾರೆ. ಅವರು ಯಾವ ಪಕ್ಷದ ಪರವಾಗಿ ಇದ್ದಾರೆ ಅನ್ನೋದನ್ನು ಹೇಳುವುದಿಲ್ಲ. ಅವರನ್ನ ಬಿಜೆಪಿಯವರಿಗೂ ಚೇಂಜ್ ಮಾಡುವುದಕ್ಕೆ ಆಗಲ್ಲ, ನಾವೂ ಚೇಂಜ್ ಮಾಡುವುದಕ್ಕೆ ಆಗೊಲ್ಲ. ಅವರೆಲ್ಲರೂ ಪ್ರಜ್ಞಾವಂತ ಮತದಾರರು ಎಂದು ಸತೀಶ್​​ ಹೇಳಿದರು.

ಸತೀಶ್ ಜಾರಕಿಹೊಳಿ‌

ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಳೀಯ‌ ನಾಯಕರು ನಮ್ಮ ಜೊತೆಗಿದ್ದಾರೆ. ರಮೇಶ್ ಜಾರಕಿಹೊಳಿ‌ ಯಾವುದೇ ಅಭಿವೃದ್ಧಿ ಮಾಡಿಲ್ಲ, ಇದನ್ನು ಜನರಿಗೆ‌ ತಿಳಿಸುವ ಪ್ರಯತ್ನ ಮಾಡುತ್ತೇವೆ. ಪ್ರಜ್ಞಾವಂತ ಮತದಾರರು ಗೋಕಾಕ್ ಬದಲಾವಣೆ ಬಯಸಿದ್ದಾರೆ ಎಂದರು.

ABOUT THE AUTHOR

...view details