ಬೆಳಗಾವಿ: ಕೊರೊನಾ ಭೀತಿಯಿಂದಾಗಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ಕೇಂದ್ರದ ಆದೇಶ ಉಲ್ಲಂಘಿಸಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಅನಗತ್ಯವಾಗಿ ಬೈಕ್ನಲ್ಲಿ ಸುತ್ತಾಡುತ್ತಿದ್ದ ಯುವಕರಿಗೆ ಕಿತ್ತೂರು ಠಾಣೆ ಪೊಲೀಸರು ವರ್ಕೌಟ್ ಮಾಡಿಸಿದ್ದಾರೆ.
ಅನಗತ್ಯ ತಿರುಗಾಡಬೇಡಿ ಅಂದ್ರೂ ಕೇಳದ ಜನ... ಬಸ್ಕಿ ಹೊಡೆಸಿದ ಪೊಲೀಸರು - ಬಸ್ಕಿ ಹೊಡೆಸಿದ ಪೊಲೀಸರು
ಬೆಳಗಾವಿ ನಗರದಲ್ಲಿ ಅನಗತ್ಯವಾಗಿ ಸುತ್ತಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಬಸ್ಕಿ ಹೊಡೆಸಿದ ಪೊಲೀಸರು
ಕಿತ್ತೂರು ಪಟ್ಟಣದಲ್ಲಿ ಅನಗತ್ಯವಾಗಿ ಬೈಕ್ನಲ್ಲಿ ಸುತ್ತಾಡುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ರಸ್ತೆಯಲ್ಲಿಯೇ ನಿಲ್ಲಿಸಿ ಬಸ್ಕಿ ಹಾಗೂ ಪುಷಪ್ ಹೊಡೆಸಿ ರಸ್ತೆಗಿಳಿಯದಂತೆ ವಾರ್ನಿಂಗ್ ಮಾಡಿ ಕಳಿಸಿದ್ದಾರೆ.
ಕೊರೊನಾ ಭೀತಿಯಿದ್ದರೂ ಮಾಸ್ಕ್ ಧರಿಸದೇ ನಗರದಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಶರ್ಟ್ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿ ಕಳುಹಿಸಿದ್ದಾರೆ.