ಅಥಣಿ:ಮಾಸ್ಕ್ ಹಾಕಿದವರಿಗೆ ದಂಡ ವಿಧಿಸಲು ಹೋದ ಪುರಸಭೆ ಮುಖ್ಯಾಧಿಕಾರಿಗೆ ಸಾರ್ವಜನಿಕರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಮಾಸ್ಕ್ ಹಾಕಿದ್ದರೂ ದಂಡ: ಪೇಚಿಗೆ ಸಿಲುಕಿದ ಪುರಸಭೆ ಮುಖ್ಯಾಧಿಕಾರಿ - ಅಥಣಿಯಲ್ಲಿ ಮಾಸ್ಕ್ ಹಾಕಿದವರಿಗೆ ದಂಡ
ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ತಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಮಾಸ್ಕ್ ಹಾಕದವರಿಗೆ ಮಾತ್ರ ದಂಡ ವಿಧಿಸುವ ಬದಲಾಗಿ ಮಾಸ್ಕ್ ಹಾಕಿಕೊಂಡವರಿಗೂ ಸಹ ದಂಡ ವಿಧಿಸಿ ಪೇಚಿಗೆ ಸಿಲುಕಿಕೊಂಡಿದ್ದಾರೆ.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ತಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಮಾಸ್ಕ್ ಹಾಕದವರಿಗೆ ಮಾತ್ರ ದಂಡ ವಿಧಿಸುವ ಬದಲಾಗಿ ಮಾಸ್ಕ್ ಹಾಕಿಕೊಂಡವರಿಗೂ ಸಹ ದಂಡ ವಿಧಿಸಲು ಮುಂದಾಗಿದ್ದರಂತೆ. ನಿನ್ನೆ ಒಮ್ಮೆಲೇ ಬಂದು ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಕೀಲಿಗಳನ್ನು ತಗೆದುಕಂಡು ಪೊಲೀಸರಂತೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಸ್ಕ್ ಹಾಕಿಕೊಂಡು ಹಾಗೂ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಾಹನ ಸವಾರರನ್ನು ನಿಲ್ಲಿಸಿ ದಂಡ ವಸೂಲಿ ಮಾಡಲು ಹೋಗಿದ್ದಾಗ ಓರ್ವ ಸವಾರ ಪುರಸಭೆ ಮುಖ್ಯಾಧಿಕಾರಿಗೆ ಏಕವಚನೆದಲ್ಲೇ ಬಹಿರಂಗವಾಗಿಯೇ ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾನೆ.