ಕರ್ನಾಟಕ

karnataka

ETV Bharat / state

ಮಾನವೀಯತೆ ಮರೆತು ಅಧಿಕಾರಿಗಳಿಂದ ದರ್ಪ: ನಿರಾಶ್ರಿತರ ಆರೋಪ

ಭೀಕರ ಮಳೆ ಪ್ರವಾಹದ ಜೊತೆಗೆ ಜನರ ಬದುಕು ಕೊಚ್ಚಿಹೋಗಿದೆ. ತಮ್ಮ ಸೂರು ಕಳೆದುಕೊಂಡು ಬೀದಿಗೆ ಬಿದ್ದಿರುವ ಮಂದಿ ಈಗ ದಿಕ್ಕು ತೋಚದಂತಾಗಿದ್ದಾರೆ. ಬೆಳಗಾವಿಯಲ್ಲಿ ಸೂರು ಕಳಕೊಂಡವರಿಗೆ ಆಶ್ರವಾಗಿದ್ದ ಶಾಲೆಯನ್ನು ನಿರಾಶ್ರಿತರು ತೊರೆಯಬೇಕಿದೆ.

ನಿರಾಶ್ರಿತರು ಕಂಗಾಲು

By

Published : Aug 14, 2019, 10:45 AM IST

ಬೆಳಗಾವಿ: ಪ್ರವಾಹಕ್ಕೆ ಸೂರು ಕಳೆದುಕೊಂಡು ಕಾಳಜಿ ಕೇಂದ್ರ ಸೇರಿದ್ದ ಸಂತ್ರಸ್ತರನ್ನು ಪಿಡಿಒ,‌ ಪೊಲೀಸರೇ ಕೇಂದ್ರದಿಂದ ಹೊರನಡೆಯುವಂತೆ ಅವಾಜ್ ಹಾಕಿದ್ದಾರೆ ಎಂಬ ಆರೋಪ ಜಿಲ್ಲೆಯ ಖಾನಾಪುರ ತಾಲೂಕಿನ ಹಿರೇಹಟ್ಟಿಹೋಳಿ ಗ್ರಾಮದಲ್ಲಿ ಕೇಳಿಬಂದಿದೆ.

ಸೂರಿಲ್ಲದೆ ಕಂಗಾಲಾದ ನಿರಾಶ್ರಿತರು

ಸ್ವಾತಂತ್ರ್ಯೋತ್ಸವ ನಿಮಿತ್ತ ನಾಳೆ ಧ್ವಜಾರೋಹಣ ‌ನೆರವೇರಿಸಬೇಕಿದೆ. ತಕ್ಷಣವೇ ಶಾಲೆಯಿಂದ ಹೊರ ನಡೆಯಿರಿ ಎಂದು ಕಾಳಜಿ ಕೇಂದ್ರದಲ್ಲಿದ್ದ ನಿರಾಶ್ರಿತರಿಗೆ ಪಿಡಿಒ, ಗ್ರಾಮ ಪಂಚಾಯತ್​ ಅಧ್ಯಕ್ಷ, ಪೊಲೀಸರು ಧಮ್ಕಿ ಹಾಕಿದ್ದಾರೆ ಎಮದು ಸಂತ್ರಸ್ತರು ದೂರಿದ್ದಾರೆ. ಅಧಿಕಾರಿಗಳ ‌ವರ್ತನೆಗೆ ಸೂರು‌ ಕಳೆದುಕೊಂಡು ಕಾಳಜಿ ಕೇಂದ್ರ ‌ಸೇರಿದ್ದವರು ಈಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹದಿಂದ ಮನೆ‌ ಕುಸಿದುಬಿದ್ದಿದ್ದು, ಈಗ ಎಲ್ಲಿಗೆ ಹೋಗಬೇಕು ಎಂಬ ಚಿಂತೆ ಈ ನಿರಾಶ್ರಿತರನ್ನು ಕಾಡುತ್ತಿದೆ. ಕಾಳಜಿ ಕೇಂದ್ರದಿಂದ ಹೊರಹಾಕುತ್ತಿರುವ ಅಧಿಕಾರಿಗಳ ಧೋರಣೆಗೆ ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲ ಸಂತ್ರಸ್ತರಿಗೆ ಸರ್ಕಾರದಿಂದ 3,800 ರೂ.ಗಳ ಚೆಕ್‌ ಕೊಟ್ಟು ಜಾಗ ಖಾಲಿ ಮಾಡಿಸಲಾಗುತ್ತಿದೆ. ಹೀಗಾಗಿ ಪಿಡಿಒ, ಪೊಲೀಸರ‌ ವಿರುದ್ಧ ನಿರಾಶ್ರಿತರು ಆಕ್ರೋಶ ಹೊರ ಹಾಕುತ್ತಿದ್ದಾರೆ. ನೂರಕ್ಕೂ ಅಧಿಕ ನಿರಾಶ್ರಿತರು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.

ABOUT THE AUTHOR

...view details