ಚಿಕ್ಕೋಡಿ:ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಏರಿ ಎತ್ತಾ ಐಸಾ... ಸಾರಿಗೆ ಸಚಿವರ ತವರಲ್ಲೇ ಕೆಟ್ಟುನಿಲ್ತಿವೆ ಬಸ್, ಅರ್ಧಕ್ಕೆ ನಿಂತ ಬಸ್ ತಳ್ಳಿದ ಜನ: ವಿಡಿಯೋ - chikkodi News
ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಅವರ ಕ್ಷೇತ್ರ ಅಥಣಿಯಲ್ಲಿ ಸಾರಿಗೆ ಬಸ್ ವ್ಯವಸ್ಥೆ ಸರಿಯಿಲ್ಲದ ಕಾರಣ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.
ಸಾರಿಗೆ ಸಚಿವರ ಕ್ಷೇತ್ರದಲ್ಲೆ ಸರಿಯಿಲ್ಲ ಸಾರಿಗೆ ವ್ಯವಸ್ಥೆ..ಸಚಿವರೇ ಸ್ವಲ್ಪ ಇತ್ತ ಕಡೆ ನೋಡಿ..?
ಅಥಣಿಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಗಳನ್ನ ಹತ್ತಿದ್ರೆ, ಅರ್ಧ ದಾರಿಯಲ್ಲಿ ಇಳಿದು ತಳ್ಳಬೇಕು. ಈ ಸಮಸ್ಯೆ ಈಗಿನದಲ್ಲ. ಕಳೆದ ಹಲವಾರು ತಿಂಗಳಿನಿಂದ ಒಂದಿಲ್ಲೊಂದು ಅವ್ಯವಸ್ಥೆಯಿಂದ ಸಾರಿಗೆ ಬಸ್ಗಳ ಕಾಟ ತಾಳದೆ, ಇಲ್ಲಿನ ಜನರು ಹೈರಾಣಾಗಿದ್ದಾರೆ.
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಇಂತಹ ಪರಿಸ್ಥಿತಿ ಎದುರಾಗಿದ್ದು ದುರಂತ. ಇನ್ನಾದ್ರೂ, ಸಚಿವರು ಇತ್ತಕಡೆ ಗಮನ ಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.