ಕರ್ನಾಟಕ

karnataka

ETV Bharat / state

ಬೈಲಹೊಂಗಲದಲ್ಲಿ ಮಳೆಗಾಗಿ ಪರ್ಜನ್ಯ ಹೋಮ.. ರೈತರು-ಯೋಧರಿಗಾಗಿ ಪ್ರಾರ್ಥಿಸಿದ ಮಹಾಂತೇಶ್ ಶಾಸ್ತ್ರಿ - undefined

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ ಕಾರಣ ತಾಲೂಕಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಅವರ ನೇತೃತ್ವದಲ್ಲಿ ಮಳೆಗಾಗಿ ಪರ್ಜನ್ಯ ಹೋಮ ಮಾಡಲಾಯಿತು.

ಮಳೆಗಾಗಿ ಪರ್ಜನ್ಯ ಹೋಮ

By

Published : Jun 11, 2019, 2:31 PM IST

ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು ಜನ ಜಾನುವಾರಗಳಿಗೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ‌ಗಾಗಿ ಜನ ದೇವರ ಮೊರೆ ಹೋಗ್ತಿದ್ದಾರೆ. ಮಳೆಗಾಗಿ ವಿಶೇಷ ಹೋಮ-ಹವನ, ಪೂಜೆ ಮಾಡುತ್ತಿದ್ದಾರೆ.

ತಾಲೂಕಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ನೇತೃತ್ವದಲ್ಲಿ ಮಳೆಗಾಗಿ ಪರ್ಜನ್ಯ ಹೋಮ ಮಾಡಲಾಯಿತು.

ಮಳೆಗಾಗಿ ಪರ್ಜನ್ಯ ಹೋಮ

ಹೋಮ ನೆರವೇರಿಸಿ ಮಾತನಾಡಿದ ಮಾಹಾಂತೇಶ ಶಾಸ್ತ್ರೀಯವರು, ನಾಡಿನಲ್ಲಿ ಉತ್ತಮ ಮಳೆಯಾಗಿ ಬೆಳೆಗೆ ತಕ್ಕಂತೆ ಬೆಲೆ ಸಿಗುವಂತಾಗಲಿ‌. ದೇಶದ ಪ್ರತಿಯೊಬ್ಬ ರೈತರು ಸುಖವಾಗಿರಬೇಕು. ರೈತರಿಗೆ, ಸೈನಿಕರಿಗೆ ಒಳ್ಳೆಯದಾಗಲೆಂದು ಹೋಮ ಮಾಡಲಾಗಿದೆ ಎಂದರು.

For All Latest Updates

TAGGED:

ABOUT THE AUTHOR

...view details