ಕರ್ನಾಟಕ

karnataka

ETV Bharat / state

ಗೋವಾದಲ್ಲಿ ಕುಂದಾನಗರಿ ಮಹಿಳಾ ಪೊಲೀಸ್​​​ ತಂಡದಿಂದ ಕವಾಯತು - ಗೋವಾದಲ್ಲಿ ಕವಾಯತು ಪ್ರದರ್ಶನ

ಗಣರಾಜ್ಯೋತ್ಸವ ದಿನದಂದು ಬೆಳಗಾವಿ ಜಿಲ್ಲೆಯ ಮಹಿಳಾ ಪೊಲೀಸ್ ತಂಡ ಗೋವಾದ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಎದುರು ಶಿಸ್ತಿನ ಕವಾಯತು ಪ್ರದರ್ಶನ ನೀಡಲಿದೆ.

Pared show demonstration by the Kundanagari women police team in Goa
ಗೋವಾದಲ್ಲಿ ಕುಂದಾನಗರಿ ಮಹಿಳಾ ಪೊಲೀಸ್ ತಂಡದಿಂದ ಕವಾಯತು ಪ್ರದರ್ಶನ

By

Published : Jan 22, 2020, 7:29 AM IST

ಬೆಳಗಾವಿ:ಜಿಲ್ಲೆಯ ಮಹಿಳಾ ಪೊಲೀಸ್ ತಂಡ ಗಣರಾಜ್ಯೋತ್ಸವ ದಿನದಂದು ಗೋವಾದ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಎದುರು ಶಿಸ್ತಿನ ಕವಾಯತು ಪ್ರದರ್ಶನ ನೀಡಲಿದೆ.

ಗೋವಾದಲ್ಲಿ ಕುಂದಾನಗರಿ ಮಹಿಳಾ ಪೊಲೀಸ್ ತಂಡದಿಂದ ಕವಾಯತು ಪ್ರದರ್ಶನ

ಬೆಳಗಾವಿ ಹೊರವಲಯದ ಮಚ್ಚೆಯಲ್ಲಿರುವ ಕರ್ನಾಟಕ ಮೀಸಲು ಪೊಲೀಸ್ ‌ತರಬೇತಿ ಕೇಂದ್ರದ 35 ಮಹಿಳಾ ಪೊಲೀಸರು ಇರುವ ‌ತಂಡ ಗೋವಾ ರಾಜಧಾನಿ ಪಣಜಿಗೆ ಪ್ರಯಾಣ ಬೆಳೆಸಿತು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಮಹಿಳಾ ತಂಡ ಗೋವಾಗೆ ತೆರಳಿದ್ದು, ಗಣರಾಜ್ಯೋತ್ಸವದಂದು ಆಕರ್ಷಕ ಕವಾಯತು ಪ್ರದರ್ಶನ ನೀಡಲಿದೆ. ಈ ಹಿನ್ನೆಲೆ ಕೆಎಸ್ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಮಹಿಳಾ ತಂಡದಿಂದ ಗೌರವ ವಂದನೆ ಸ್ವೀಕರಿಸಿ ಶುಭ ಕೋರಿದರು.

ಪ್ರಧಾನಮಂತ್ರಿ ನರೇಂದ್ರ ‌ಮೋದಿ ಅವರ ಏಕ್ ಭಾರತ- ಶ್ರೇಷ್ಠ ಭಾರತ ಕಾರ್ಯಕ್ರಮದಡಿ ಪ್ರಸಕ್ತ ವರ್ಷದಿಂದ ಆಯಾ ರಾಜ್ಯ ತಂಡಗಳು ಬೇರೆ ರಾಜ್ಯದಲ್ಲಿ ಗಣರಾಜ್ಯೋತ್ಸವ ದಿನದಂದು ಕವಾಯತು ಪ್ರದರ್ಶನ ನೀಡಲಿವೆ. ಗೋವಾ ತಂಡ ಕೂಡ ಬೆಂಗಳೂರಿಗೆ ಆಗಮಿಸಿ ಗಣರಾಜ್ಯೋತ್ಸವ ದಿನದಂದು ಕವಾಯತು ಪ್ರದರ್ಶನ ನೀಡಲಿದೆ. ರಾಜ್ಯಗಳನ್ನು ಪರಸ್ಪರ ಬೆಸಯಲು ಸ್ಟೇಟ್ ಪರೇಡ್ ಮಹತ್ವದ ಕಾರ್ಯಕ್ರಮವಾಗಿದೆ. ಕೆಎಸ್ಆರ್​ಪಿ ಬೆಳಗಾವಿ ಕಮಾಂಡಂಟ್ ಹಮ್ಜಾ ಹುಸೇನ್ ಪರೇಡ್​ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ABOUT THE AUTHOR

...view details