ಕರ್ನಾಟಕ

karnataka

ETV Bharat / state

ಕೆಸರಿ ಬಿಳಿ ಹಸಿರು ಬಣ್ಣದಿಂದ ಕಂಗೊಳಿಸಿದ ಪಾಂಡುರಂಗ - Pandharpur Vitthal Rukmini Temple

ಮಹಾರಾಷ್ಟ್ರದ ಪಂಡರಾಪುರದ ಪಾಂಡುರಂಗ ದೇವಾಲಯ ಕೇಸರಿ ಬಿಳಿ ಹಸಿರು ಬಣ್ಣದಿಂದ ಕಂಗೊಳಿಸುತ್ತಿದೆ. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇವಾಲಯ ಹಾಗೂ ಮೂಲ ವಿಗ್ರಹಗಳಿಗೆ ರಾಷ್ಟ್ರಧ್ವಜ ಹೋಲುವ ಬಣ್ಣಗಳ ಹೂವಿನಿಂದ ಅಲಂಕಾರ ಮಾಡಲಾಗಿದೆ.

Pandharpur Vitthal Rukmini Temple
ಪಂಡರಾಪುರದ ಪಾಂಡುರಂಗ

By

Published : Jan 26, 2020, 9:01 PM IST

ಅಥಣಿ: ದೇಶಾದ್ಯಂತ ಇಂದು 71ನೇ ಗಣರಾಜ್ಯೋತ್ಸವ ಕಳೆಗಟ್ಟಿದೆ. ಪ್ರತಿ ಸರ್ಕಾರಿ ಕಚೇರಿ, ಸಂಸ್ಥೆಗಳು, ವಿವಿಧ ಸಂಘಟನೆಗಳು, ಶಾಲಾ- ಕಾಲೇಜುಗಳಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಾಯಿತು.

ಅದೇ ರೀತಿ ಗಡಿನಾಡು ಮಹಾರಾಷ್ಟ್ರದ ರಾಜ್ಯದ ಸೊಲ್ಲಾಪುರದ ಜಿಲ್ಲೆಯ ಪಂಡರಾಪುರ ವಿಠ್ಠಲ-ರುಕ್ಮಿಣಿ ದೇವಾಸ್ಥಾನದಲ್ಲಿ ರಾಷ್ಟ್ರ ಪ್ರೇಮ ಮೆರೆಯಲಾಗಿದೆ. ಇಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪಾಂಡುರಂಗ ದೇವಸ್ಥಾನ ಸಂಪೂರ್ಣ ಕೇಸರಿ, ಬಿಳಿ, ಹಸಿರು, ಬಣ್ಣದಿಂದ ಕಂಗೊಳಿಸುತ್ತಿದೆ.

ವಿಠ್ಠಲ-ರುಕ್ಮಿಣಿ ದೇವಾಸ್ಥಾನ ಗರ್ಭಗುಡಿ ಮತ್ತು ವಿಠ್ಠಲ ರುಕ್ಮಿಣಿ ಮೂಲ ವಿಗ್ರಹಕ್ಕೆ ರಾಷ್ಟ್ರಧ್ವಜ ಹೊಂದಿರುವ ಬಣ್ಣಗಳ ಹೂವಿನಿಂದ ಅಲಂಕಾರ ಮಾಡಿದ್ದಾರೆ. ಇಂದು ರಜಾ ದಿನದಂದು ಲಕ್ಷಾಂತರ ಭಕ್ತರು ಬರುವ ಹಿನ್ನಲೆ ದೇವರ ಮೇಲಿನ ಭಕ್ತಿ ಜೊತೆಗೆ ರಾಷ್ಟ್ರೀಯ ಭಕ್ತಿಯೂ ಹೆಚ್ಚುತ್ತಿದೆ.

ABOUT THE AUTHOR

...view details