ಬೆಳಗಾವಿ:ಪಂಚಮಸಾಲಿ 2ಎ ಮೀಸಲಾತಿಗೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ವರದಿ ಸಲ್ಲಿಸಿದ್ದಾರೆ.
ಸಿಎಂಗೆ ಹಿಂದುಳಿದ ಆಯೋಗದಿಂದ ಪಂಚಮಸಾಲಿ ಸಮಾಜದ ವರದಿ ಸಲ್ಲಿಕೆ - ಪಂಚಮ ಸಾಲಿ ವಿರಾಟ್ ಪಂಚ ಶಕ್ತಿ ಬೃಹತ್ ಸಮಾವೇಶ
ಇವತ್ತು ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರಮಾಣದ ಪ್ರತಿಭಟನೆ ಹಿನ್ನೆಲೆ, ಸರ್ಕಾರ ಎಚ್ಚೆತ್ತುಕೊಂಡು ಹಿಂದುಳಿದ ಆಯೋಗದಿಂದ ವರದಿಯನ್ನು ತರಿಸಿಕೊಂಡಿದ್ದಾರೆ ಎಂಬ ಮಾಹಿತಿಗಳು ಕೆಲವು ಮೂಲಗಳಿಂದ ತಿಳಿದು ಬಂದಿದೆ.
ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರಿಂದ ಸಿಎಂಗೆ ಪಂಚಮಸಾಲಿ ಸಮಾಜದ ವರದಿ ಸಲ್ಲಿಕೆ
ಇವತ್ತು ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರಮಾಣದ ಪ್ರತಿಭಟನೆ ಹಿನ್ನೆಲೆ, ಸರ್ಕಾರ ಎಚ್ಚೆತ್ತುಕೊಂಡು ಹಿಂದುಳಿದ ಆಯೋಗದಿಂದ ವರದಿಯನ್ನು ತರಿಸಿಕೊಂಡಿದ್ದಾರೆ ಎಂಬ ಮಾಹಿತಿಗಳು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಮಧ್ಯಾಹ್ನ ನಡೆಯಲಿರುವ ಪಂಚಮ ಸಾಲಿ ವಿರಾಟ್ ಪಂಚ ಶಕ್ತಿ ಬೃಹತ್ ಸಮಾವೇಶದಲ್ಲಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದು:ಪಂಚಮಸಾಲಿ ಮೀಸಲಾತಿ ಇಂದೇ ಘೋಷಿಸಿ.. ಇಲ್ಲವಾದರೆ ನೀವೇ ಬಿಜೆಪಿ ಕೊನೆ ಸಿಎಂ: ಶಾಸಕ ಯತ್ನಾಳ್