ಕರ್ನಾಟಕ

karnataka

ETV Bharat / state

ಪಂಚಮಸಾಲಿ ಸಮಾಜದಿಂದ ಪಂಚ ವಿರಾಟ್ ಶಕ್ತಿ ಪ್ರದರ್ಶನ: ಬೆಳಗಾವಿಯಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ - ಸಮಾವೇಶ ವೇದಿಕೆ ಸಿದ್ದತೆ

ಸುವರ್ಣಸೌಧ ಮುಂಭಾಗ ನೂರು ಎಕರೆ ಪ್ರದೇಶದಲ್ಲಿ ಸಮಾವೇಶ ವೇದಿಕೆ ಸಿದ್ದತೆ ಮಾಡಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆಯಿದೆ.

Police deployment in Belgaum
ಬೆಳಗಾವಿಯಲ್ಲಿ ಪೊಲೀಸ್​ ಬಂದೋಬಸ್ತ್​

By

Published : Dec 22, 2022, 10:45 AM IST

Updated : Dec 22, 2022, 11:51 AM IST

ಪಂಚಮಸಾಲಿ ಸಮಾಜದಿಂದ ಪಂಚ ವಿರಾಟ್ ಶಕ್ತಿ ಪ್ರದರ್ಶನ

ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿ ಒತ್ತಾಯಿಸಿ ಇಂದು ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಪಂಚಮಸಾಲಿ ಸಮಾಜದಿಂದ ಪಂಚ ವಿರಾಟ್ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಒತ್ತಾಯಿಸಿ ಬೃಹತ್ ಪ್ರಮಾಣದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುವರ್ಣಸೌಧ ಮುಂಭಾಗ ನೂರು ಎಕರೆ ಪ್ರದೇಶದಲ್ಲಿ ಸಮಾವೇಶ ವೇದಿಕೆ ಸಿದ್ದತೆ ಮಾಡಲಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಸೇರುವುದರಿಂದ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಟ್ಟಿಸಲಾಗಿದೆ.

ಹೀರೆ ಬಾಗೇವಾಡಿ ಗ್ರಾಮದಿಂದ ಪ್ರತಿಭಟನೆ ಸ್ಥಳದವರಗೆ ದಾರಿ ಉದ್ದಕ್ಕೂ ಮೂರು ಸಾವಿರ ಪೊಲೀಸ್ ​ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತಿಭಟನೆಯಲ್ಲಿ ಪಂಚಮಸಾಲಿ ಹಲವು ಶಾಸಕರು ಹಾಗೂ ಮಠಾಧೀಶರು ಭಾಗಿಯಾಗಲಿದ್ದಾರೆ. ಇವತ್ತು ಒಂದು ವೇಳೆ ಮೀಸಲಾತಿ ನೀಡದಿದ್ದರೆ ಸುವರ್ಣಸೌಧ ಮುತ್ತಿಗೆ ಹಾಕುತ್ತೇವೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಸುವರ್ಣಸೌಧದತ್ತ ಪಂಚಮಸಾಲಿ ಸಮುದಾಯ ಪಾದಯಾತ್ರೆ: ಅಧಿವೇಶನದ ಎರಡನೇ ದಿನ ಸಾಲು ಸಾಲು ಪ್ರತಿಭಟನೆ

Last Updated : Dec 22, 2022, 11:51 AM IST

ABOUT THE AUTHOR

...view details