ಬೆಳಗಾವಿ:ಪಾನ್ ಅಂಗಡಿ ನಡೆಸುತ್ತಿದ್ದಾತನನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ವಡಗಾವಿಯಲ್ಲಿ ನಡೆದಿದೆ. ನಗರದ ಶಹಾಪೂರ ಠಾಣಾ ವ್ಯಾಪ್ತಿಯಲ್ಲಿ ಬರುವ ವಡಗಾವಿ ಪ್ರದೇಶದ ಲಕ್ಷ್ಮಿ ನಗರದ ನಿವಾಸಿ ಪಾನ್ ಅಂಗಡಿ ಮಾಲೀಕ ಬಾಳಕೃಷ್ಣ ಶೆಟ್ಟಿ (50) ಕೊಲೆಯಾದವರು.
ದುಷ್ಕರ್ಮಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಪಾನ್ ಅಂಗಡಿ ಮಾಲೀಕನ ಬರ್ಬರ ಹತ್ಯೆ - ಬೆಳಗಾವಿ ಸುದ್ದಿ
ಪಾನ್ ಅಂಗಡಿ ಮಾಲೀಕನ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದ ದುಷ್ಕರ್ಮಿಗಳು ಮನೆಗೆ ಬಂದು ಆತನನ್ನು ಕೊಲೆ ಮಾಡುವ. ಶಹಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
![ದುಷ್ಕರ್ಮಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಪಾನ್ ಅಂಗಡಿ ಮಾಲೀಕನ ಬರ್ಬರ ಹತ್ಯೆ pan-shop-owner-killed-in-belegavi](https://etvbharatimages.akamaized.net/etvbharat/prod-images/768-512-13068202-thumbnail-3x2-bgm.jpg)
ಕ್ಷುಲ್ಲಕ ಕಾರಣಕ್ಕೆ ಪಾನ್ ಅಂಗಡಿ ಮಾಲೀಕನ ಬರ್ಬರ ಹತ್ಯೆ
ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ಜೀವನ ನಿರ್ವಹಣೆಗೆ ಬಾಳಕೃಷ್ಣ ಶೆಟ್ಟಿ ಹಲವಾರು ವರ್ಷಗಳಿಂದ ಲಕ್ಷ್ಮಿ ನಗರದಲ್ಲಿ ಪಾನ್ ಅಂಗಡಿ ನಡೆಸುತ್ತಿದ್ದರು. ಸ್ಥಳಕ್ಕೆ ಶಹಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕಟ್ಟಡ ನಿರ್ಮಾಣದ ವೇಳೆ ಆಯತಪ್ಪಿ ರಾಡ್ ಮೇಲೆ ಬಿದ್ದ ಕಾರ್ಮಿಕ: ಗಂಭೀರ ಗಾಯ