ಚಿಕ್ಕೋಡಿ: ಕೊರೊನಾ ಮಹಾಮಾರಿಯಿಂದ ಜನರು ಒಂದೆಡೆ ಸೇರಬಾರದೆಂದು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಆದರೆ ಈ ಮಧ್ಯೆ ದೇವರ ಪಲ್ಲಕಿ ಉತ್ಸವ ಮಾಡುವ ಮೂಲಕ ಮತ್ತೆ ಸೋಂಕು ಹರಡಲು ಗ್ರಾಮದ ಜನತೆ ಮುಂದಾದಂತಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಬೆಂಬಿಡದೆ ಕಾಡುತ್ತಿರುವ ಕೊರೊನಾ ಮಧ್ಯೆಯೇ ಗ್ರಾಮಸ್ಥರು ಪಲ್ಲಕ್ಕಿ ಉತ್ಸವ ಆಚರಿಸಿದ್ದಾರೆ. ವಾರ ಪದ್ಧತಿ ಆಚರಿಸಿ, ಗ್ರಾಮದ ಎಲ್ಲಾ ದೇವತೆಗಳ ಪಲ್ಲಕ್ಕಿ ತಂದು ಪ್ರದಕ್ಷಿಣೆ ಹಾಕಿದ್ದಾರೆ. ಊರ ಸೀಮೆ ಪ್ರದಕ್ಷಿಣೆ ಹಾಕಿ ದೇವರ ಮೂಲಕವೇ ದಿಗ್ಬಂಧನ ಹಾಕುವ ನಂಬಿಕೆ ಇವರದ್ದಾಗಿದೆ.