ಬೆಳಗಾವಿ:ತಾಲೂಕಿನ ಮುತ್ನಾಳ ಗ್ರಾಮದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓವರ್ ಟೇಕ್ ಮಾಡುವ ಸಂದರ್ಭ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದ ಘಟನೆ ಬೆಳಗ್ಗೆ ನಡೆದಿತ್ತು. ಅದೃಷ್ಟವಶಾತ್ ಅಪಘಾತದ ವೇಳೆ ಆಕ್ಸಿಜನ್ ಲಿಕ್ವಿಡ್ ಟ್ಯಾಂಕ್‌ಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಇದೀಗ ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಡಿಸಿಎಂ ಗೋವಿಂದ ಕಾರಜೋಳ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಕೊಲ್ಲಾಪುರದಿಂದ ಎಸ್ಕಾರ್ಟ್‌ನಲ್ಲಿ ಖಾಲಿ ಟ್ಯಾಂಕರ್ ತರಲು ಎಸ್‌ಪಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಟ್ಯಾಂಕರ್ ನಿಪ್ಪಾಣಿಗೆ ತಲುಪಿದ್ದು, ಆದಷ್ಟು ಬೇಗ ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲಾಗುವುದು ಎಂದರು.