ಬೆಳಗಾವಿ :ಆಸ್ಪತ್ರೆ ಹಾಗೂ ಹೋಂ ಐಸೋಲೇಶನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ನೀಗಿಸಲು ಬಸ್‍ನಲ್ಲಿ ಆಕ್ಸಿಜನ್ ಸೇವೆಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಾಲನೆ ನೀಡಿದರು.
ಮೊಬೈಲ್ ಆಸ್ಪತ್ರೆಗೆ ಬೆಳಗಾವಿ ಡಿಸಿ ಚಾಲನೆ.. ಓದಿ: ಬೆಳಗಾವಿ ಜಿಲ್ಲೆಯ 89 ಶಿಕ್ಷಕರನ್ನು ಬಲಿ ಪಡೆದ ಮಹಾಮಾರಿ ಕೊರೊನಾ
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಹಿರೇಮಠ, ಆಕ್ಸಿಜನ್ ಸಿಲಿಂಡರ್ ಅಳವಡಿಸಿರುವ ಮೊಬೈಲ್ ಬಸ್ ಆಸ್ಪತ್ರೆಗಳ ನಡುವೆ ಸಂಚರಿಸಿ ಅಗತ್ಯ ಇರುವವರಿಗೆ ಸೇವೆ ನೀಡಲಿವೆ.
ಇದರ ಜೊತೆಗೆ ಹೋಂ ಐಸೋಲೇಶನ್‍ನಲ್ಲಿ ಇರುವವರಿಗೆ ಅನುಕೂಲವಾಗಲು ಹಿಂಡಾಲ್ಕೋ ನೀಡಿರುವ 25 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಬಿಮ್ಸ್‌ನ ಕೊಠಡಿಯಲ್ಲಿ ಅಳವಡಿಸಲಾಗಿದ್ದು, ಸಮರ್ಪಕ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
18 ವಿಧಾನಸಭೆ ಕ್ಷೇತ್ರಗಳಿಗೆ 72 ಆಕ್ಸಿಜನ್ ಸಿಲಿಂಡರ್ ನೀಡಲು ಕ್ರಮ ವಹಿಸಲಾಗಿದೆ. ಬಿಮ್ಸ್ನಲ್ಲಿ 400 ಆಕ್ಸಿಜನ್ ಬೆಡ್‌ಗಳಿದ್ದು, ಉಳಿದ 300 ಬೆಡ್‍ಗಳು ಸಾಮಾನ್ಯವಾಗಿವೆ. ಅಗತ್ಯವಿದ್ದವರಿಗೆ ಆಕ್ಸಿಜನ್ ವ್ಯವಸ್ಥೆಯಾಗಲಿದೆ ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗುತ್ತಿದೆ. ಇದಕ್ಕಾಗಿ ಸಮೀಪದ ಹಾಸ್ಟೆಲ್‍ಗಳಲ್ಲಿ ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.
ಪಾಸಿಟಿವ್ ಬಂದವರು ಕಡ್ಡಾಯವಾಗಿ ಕೋವಿಡ್ ಕೇರ್ನಲ್ಲಿ ದಾಖಲಾಗಬೇಕು. ಅವರಿಗೆ ಊಟ, ತಿಂಡಿ, ಉಪಚಾರ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಸಿಇಒ ದರ್ಶನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಧರ ಮುನ್ಯಾಳ, ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ, ಸಾರಿಗೆ ಸಂಸ್ಥೆಯ ಡಿಸಿ ಮುಂಜಿ, ಡ್ರಗ್ ಕಂಟ್ರೋಲರ್ ರಘುರಾಮ್ ಇದ್ದರು.