ಚಿಕ್ಕೋಡಿ (ಬೆಳಗಾವಿ) :ಕಳೆದ ಎರಡು ತಿಂಗಳ ಹಿಂದೆ ಚಿಕ್ಕೋಡಿ ಉಪವಿಭಾಗದ ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ 14 ಗ್ರಾಮಗಳು ತತ್ತರಿಸಿವೆ. ಈವರೆಗೂ ಸಂತ್ರಸ್ತರಿಗೆ ಪರಿಹಾರ ಸಿಗದೆ ಅವರ ಬಾಳು ಸಂಕಷ್ಟಕ್ಕೆ ಸಿಲುಕಿದೆ.
10 ಸಾವಿರ ರೂಪಾಯಿ ಪ್ರತಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿಸರ್ಕಾರ ತುರ್ತಾಗಿ ಘೋಷಣೆ ಮಾಡಿತ್ತು. ಆದರೆ, ಅಥಣಿ ತಾಲೂಕಿನ ನಾಲ್ಕು ಗ್ರಾಮಗಳಿಗೆ ಪರಿಹಾರ ವಿತರಣೆ ಆಗದೆ ಇರುವುದರಿಂದ ನೆರೆ ಸಂತ್ರಸ್ತರು ಪರಿಹಾರ ಹಣಕ್ಕಾಗಿ ತಿಂಗಳಿನಿಂದ ಕಾಯುವಂತಾಗಿದೆ.
ಪ್ರವಾಹದ ಬಳಿಕ ಬೆಳಗಾವಿಗೆ ಭೇಟಿ ನೀಡಿದ್ದ ಸಿಎಂ ಬಸವರಾಜ ಮೊಮ್ಮಾಯಿ, ತಕ್ಷಣವೇ ನೆರೆ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಆದರೆ, ಅಥಣಿ ತಾಲೂಕಿನ ಝುಂಜರವಾಡ, ಶಿರಹಟ್ಟಿ, ಬಳವಾಡ್, ಸವದಿ, ನಾಲ್ಕು ಗ್ರಾಮಸ್ಥರಿಗೆ ಇನ್ನೂ ಈ ಪರಿಹಾರ ಸಿಕ್ಕಿಲ್ಲ.