ಚಿಕ್ಕೋಡಿ : ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿಕ್ವಾರಂಟೈನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟು, ಕೆಲ ಹೊತ್ತು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಮ್ಮೂರಲ್ಲಿ ಕ್ವಾರಂಟೈನ್ ಮಾಡ್ಲೇಬೇಡಿ..... ಮಜಲಟ್ಟಿ ಗ್ರಾಮಸ್ಥರ ಬಿಗಿಪಟ್ಟು - Outrage by Majalatti villagers
ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಮುಂದಾಗಿದ್ದ ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ತಿರುಗಿ ಬಿದ್ದರು. ವಾಗ್ವಾದಕ್ಕೆ ಇಳಿದ ಜನ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಜಲಟ್ಟಿ ಗ್ರಾಮಸ್ಥರಿಂದ ಆಕ್ರೋಶ
ಮಜಲಟ್ಟಿ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲು ಮುಂದಾಗಿದ್ದ ಜಿಲ್ಲಾಡಳಿತದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ವಾಗ್ವಾದಕ್ಕೆ ಇಳಿದರು.
ನಮ್ಮ ಊರಲ್ಲಿ ಯಾರನ್ನೂ ಕ್ವಾರಂಟೈನ್ ಮಾಡಬೇಡಿ. ಇಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಇನ್ನು ಕೆಲ ದಿನಗಳಲ್ಲಿ ಪರೀಕ್ಷೆ ಇದೆ, ಅವರನ್ನು ಆತಂಕದಲ್ಲಿಡುತ್ತೀರಿ ಎಂದು ಗ್ರಾಮಸ್ಥರು ಗಲಾಟೆ ಆರಂಭಿಸಿದರು. ಇದರಿಂದ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.