ಕಾಗವಾಡ: ಜೆಡಿಎಸ್ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ. ಸಾಲಮನ್ನಾ ಸೇರಿದಂತೆ ಅವರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದೆ. ಇದನ್ನೆ ಹೇಳಿ ಮತ ಕೇಳುತ್ತೇವೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಶ್ರೀಮಂತ್ ಪಾಟೀಲ್ 2 ವರ್ಷದಿಂದ ಕಬ್ಬು ಬಾಕಿ ನೀಡಿಲ್ಲ, ಮತ ಹಾಕಿದ್ರೆ ಏನು ಪ್ರಯೋಜನ?: ನಾಡಗೌಡ - ಕರ್ನಾಟಕ ಉಪಚುನಾವಣೆ
ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಅವುಗಳನ್ನು ಹೇಳಿ, ಮತಯಾಚಿಸುತ್ತೇವೆ ಎಂದು ಶಾಸಕ ವೆಂಕಟರಾವ್ ರೆಡ್ಡಿ ಹೇಳಿದರು.
ಶಾಸಕ ವೆಂಕಟರಾವ್ ರೆಡ್ಡಿ
ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತುಗಶೆಟ್ಟಿ ಪರ ಮತಯಾಚಿಸಿದ ಮಾತನಾಡಿದ ಅವರು, ಶುಗರ್ ಕಾರ್ಖಾನೆ ಮಾಲೀಕರಾದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಎರಡು ವರ್ಷದಿಂದ ರೈತರ ಕಬ್ಬಿನ ಹಣ ಪಾವತಿಸಿಲ್ಲ. ಅವರಿಗೆ ಮತ ಹಾಕಿದರೆ ಆಗುವ ಪ್ರಯೋಜನವಾದರೂ ಏನು? ಪ್ರವಾಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಿಜೆಪಿ ನಾಯಕರು ಯಾವುದೇ ರೀತಿ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಹೇಳಿದರು.
ಶ್ರೀಮಂತ ಪಾಟೀಲ ಸುಳ್ಳು ಹೇಳಿಕೊಂಡು ಮತಯಾಚಿಸುತ್ತಿದ್ದಾರೆ. ಅವರಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದರು.