ಬೆಳಗಾವಿ: ರಮೇಶ್ ಜಾರಕಿಹೊಳಿ ನೀಡುವ ವೇಸ್ಟ್ ಬಾಡಿ ಹೇಳಿಕೆಗೆ ಕಿಮ್ಮತ್ತು ಕೊಡುವ ಅಗತ್ಯ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬಂದು ಐವತ್ತು ವರ್ಷ ಆಗಿದೆ. ಇಂಥ ಜನರನ್ನು ಬಹಳ ನೋಡಿದ್ದೇನೆ. ಅದಕ್ಕೆ ಏನೂ ಕಿಮ್ಮತ್ತಿಲ್ಲ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ. ಒಂದು ಕಡೆ ಗುರು ಅಂತಾರೆ, ಇನ್ನೊಂದು ಕಡೆ ಈ ರೀತಿ ಅಂತಾರೆ ಅದಕ್ಕೆಲ್ಲ ಏನು ಬೆಲೆ ಇದೆ ಎಂದು ತಿರುಗೇಟು ನೀಡಿದರು.
ಅವರಿಗೆ ರಾಜಕೀಯ ಭಾಷೆ, ಸಂಸ್ಕೃತಿ ಇಲ್ಲ. ಸಿದ್ದರಾಮಯ್ಯ ಏನು ಅಂಥ ರಾಜ್ಯದ ಜನತೆಗೆ ಗೊತ್ತಿದೆ. ಯಾರೋ ಒಬ್ಬ ವ್ಯಕ್ತಿ ಪದೇ ಪದೆ ಮಾತನಾಡುತ್ತಾರೆ ಎಂದು ಅದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ. ಹೀಗೆ ಟಾರ್ಗೆಟ್ ಮಾಡುವವರನ್ನು, ಟೀಕೆ ಮಾಡುವವರನ್ನು ಬಹಳಷ್ಟು ಜನ ನೋಡಿದ್ದೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: Karnataka Covid: ರಾಜ್ಯದಲ್ಲಿಂದು 317 ಮಂದಿಗೆ ಪಾಸಿಟಿವ್, 2 ಸೋಂಕಿತರ ಸಾವು