ಕರ್ನಾಟಕ

karnataka

By

Published : Dec 5, 2021, 5:30 PM IST

ETV Bharat / state

ರಮೇಶ್ ಜಾರಕಿಹೊಳಿ‌ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೂ ಆಶ್ಚರ್ಯವಿಲ್ಲ: ಸಿದ್ದರಾಮಯ್ಯ ಲೇವಡಿ

ರೈತರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ. ಇವರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ನಾನು ಕೊಟ್ಟ ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ನಿಲ್ಲಿಸಿದ್ದಾರೆ ಎಂದರು. ವಿವೇಕರಾವ್ ಪಾಟೀಲ್‌ಗೆ ಸಿದ್ದರಾಮಯ್ಯ ಟಿಕೆಟ್ ಕೊಡದೆ ಮೋಸ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ‌ ಹೇಳುತ್ತಿದ್ದಾರೆ. ನಮ್ಮ ಅಭ್ಯರ್ಥಿ ವಿರುದ್ಧ ವಿವೇಕರಾವ್ ಪಾಟೀಲ್ ಗೆಲ್ಲಿಸಿದ್ದರು..

siddaramaiah slams bjp, rss ramesh jarkiholi, mlc election politics
ಬಿಜೆಪಿ, ರಮೇಶ್ ಜಾರಕಿಹೊಳಿ, ಪರಿಷತ್​ ಚುನಾವಣೆಗ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ :ಕಳೆದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ರಮೇಶ್ ಜಾರಕಿಹೊಳಿ‌ ನಮ್ಮಅಭ್ಯರ್ಥಿಯನ್ನು ಸೋಲಿಸಿದರು. ಇದೀಗ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೂ ಆಶ್ಚರ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ನಡೆದ ಪರಿಷತ್​ ಚುನಾವಣೆ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡ್ತಿರುವುದು..

ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ಒಬ್ಬರನ್ನೆ ಕಣಕ್ಕಿಳಿಸಬೇಕಿತ್ತು. ಆದರೆ, ಇಬ್ಬರನ್ನು ನಿಲ್ಲಿಸಿದ್ದಾರೆ. ಬಿಜೆಪಿಯವರಿಗೆ ಇಬ್ಬಂದಿ ರಾಜಕಾರಣ ಮಾಡಿ ಗೊತ್ತು.

ಈ ಜಿಲ್ಲೆಯ ಲೀಡರ್ ರಮೇಶ್ ಜಾರಕಿಹೊಳಿ ಕಳೆದ ಬಾರಿ ನಮ್ಮ ಅಭ್ಯರ್ಥಿಯನ್ನು ಸೋಲಿಸಿಬಿಟ್ಟರು. ಈ ಸಾರಿ ಅವರ ತಮ್ಮ ಲಖನ್ ಜಾರಕಿಹೊಳಿ‌ಯನ್ನು ಸ್ಪರ್ಧೆಗಿಳಿಸಿ ಬಿಜೆಪಿ ಅಭ್ಯರ್ಥಿ ಸೋಲಿಸಿದ್ರೂ ಆಶ್ಚರ್ಯ ಇಲ್ಲ. ನಾವು ಅದನ್ನು ಕಳೆದ ಸಲ ಅನುಭವಿಸಿದ್ದೇವೆ ಎಂದರು.

ಜಿಪಂ, ತಾ‌ಪಂ ಚುನಾವಣೆ ಎದುರಿಸಲಾಗದೆ ಬಿಜೆಪಿ ಸರ್ಕಾರ ಅದನ್ನು ಮುಂದಕ್ಕೆ ಹಾಕಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಒಂದು ಕೆಲಸವನ್ನು ಇವರು ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಇವರಿಗೆ ಏಕೆ ಮತ ನೀಡಬೇಕು. ಇವರಿಗೆ ಮಾನ- ಮಾರ್ಯಾದೆ ಬೇಕಲ್ಲ ಎಂದು ಕುಟುಕಿದರು.

ರಮೇಶ್​ ಜಾರಕಿಹೊಳಿ ವಿರುದ್ಧ ಪ್ರತಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿರುವುದು..

ನಾನು ಸಿಎಂ ಆಗಿದ್ದಾಗ ವರ್ಷಕ್ಕೆ ಮೂರು ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದೇನೆ. ನಾವು 7 ಕೆಜಿ ಅಕ್ಕಿ ನೀಡಿದ್ದೆವು. ಈಗ 5 ಕೆಜಿ ಕೊಡುತ್ತಿದ್ದಾರೆ. ಅಕ್ಕಿ ವಿತರಣೆ ಕಡಿಮೆ ಮಾಡಿದ್ದೇಕೆ?, ಯಡಿಯೂರಪ್ಪ, ಬೊಮ್ಮಾಯಿಯವರು ಅವರಪ್ಪನ ಮನೆಯಿಂದ ಅಕ್ಕಿ ಕೊಡುತ್ತಿದ್ದಾರಾ?, 2023ರಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತದೆ. ಅದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಸರ್ಕಾರ ಯಾವಾಗ ತೊಲಗುತ್ತೆ ಅಂತಾ ರಾಜ್ಯದ ಜನ ಶಾಪ ಹಾಕುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ

ಬಾಯ್ತಪ್ಪಿ ಮೋದಿ ಹೆಸರು :ದೇಶದಲ್ಲಿ ಸಾಲಮನ್ನಾ ಮಾಡಿದ್ದು ನರೇಂದ್ರ ಮೋದಿ ಎಂದು ತಪ್ಪಾಗಿ ಹೇಳಿದ ಸಿದ್ದರಾಮಯ್ಯನವರು ಬಳಿಕ ಕ್ಷಮೆ ಕೋರಿ ಮನಮೋಹನ್ ಸಿಂಗ್ ಸಾಲಮನ್ನಾ ಮಾಡಿದರು. ಐದು ರಾಜ್ಯಗಳಲ್ಲಿ ಸೋತ ಬಳಿಕ ಕೃಷಿ ಕಾಯ್ದೆ ವಾಪಸ್ ಪಡೆದುಕೊಂಡಿದ್ದಾರೆ. 700 ಜನ ರೈತರು ಸಾವನ್ನಪ್ಪಿದಕ್ಕೆ ಮಿಸ್ಟರ್ ಮೋದಿಯೇ ಕಾರಣ. ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲ.

ರೈತರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ. ಇವರಿಗೆ ಮೂರು ಕಾಸಿನ ಮಾನ ಮರ್ಯಾದೆ ಇಲ್ಲ. ನಾನು ಕೊಟ್ಟ ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ನಿಲ್ಲಿಸಿದ್ದಾರೆ ಎಂದರು. ವಿವೇಕರಾವ್ ಪಾಟೀಲ್‌ಗೆ ಸಿದ್ದರಾಮಯ್ಯ ಟಿಕೆಟ್ ಕೊಡದೆ ಮೋಸ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ‌ ಹೇಳುತ್ತಿದ್ದಾರೆ. ನಮ್ಮ ಅಭ್ಯರ್ಥಿ ವಿರುದ್ಧ ವಿವೇಕರಾವ್ ಪಾಟೀಲ್ ಗೆಲ್ಲಿಸಿದ್ದರು.

ಗೆದ್ದ ಬಳಿಕ ವಿವೇಕರಾವ್ ನಮ್ಮ ಪಕ್ಷಕ್ಕೆ ಬರಲಿಲ್ಲ. ಪಕ್ಷಕ್ಕೆ ಬರದೆ ಇರುವವರಿಗೆ ಟಿಕೆಟ್ ಕೊಡಬೇಕಾ? ವಿವೇಕರಾವ್ ರಮೇಶ್ ಜಾರಕಿಹೊಳಿ‌ ಫಾಲೋವರ್. ನಿಮಗೆ ಅಷ್ಟೊಂದು ಪ್ರೀತಿ ಇದ್ದಿದ್ದರೆ ತಮ್ಮನ ಬದಲು ವಿವೇಕರಾವ್​ರನ್ನು ಚುನಾವಣೆಗೆ ನಿಲ್ಲಿಸಬೇಕಿತ್ತು. ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಮೂವರಿಗೆ ಟಿಕೆಟ್ ಕೊಟ್ಟಿದ್ದೇವೆ. ನೀವು ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದೀರಿ. ನೀವು ಆಡಿದ್ದೆ ಆಟ ಎಂದುಕೊಂಡಿದ್ದೀರಾ ಎಂದು ಗುಡುಗಿದರು.

ಸಿದ್ಧಾಂತದ ಮೇಲೆ ರಾಜಕಾರಣ ಮಾಡಬೇಕು. ಸ್ವಾರ್ಥಕ್ಕಾಗಿ, ಹೆದರಿಸಿ ರಾಜಕಾರಣ ಮಾಡುವುದಲ್ಲ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಒಬ್ಬರೂ ಮೃತರಾಗಿಲ್ಲ. ಆದರೆ, ನಮಗೆ ದೇಶ ಭಕ್ತಿ ಹೇಳಿ ಕೊಡುತ್ತಿದ್ದಾರೆ‌‌. ಮಹಾತ್ಮ ಗಾಂಧೀಜಿ ಕೊಂದವರು ಆರ್‌‌ಎಸ್‌ಎಸ್‌ನವರು. ನಾಥೂರಾಮ್ ಗೋಡ್ಸೆ ಆರ್‌ಎಸ್‌ಎಸ್‌ನವನು. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ಗೋಡ್ಸೆ ಪಳಿಯುಳಿಕೆ ಮತ್ತು ವಂಶಸ್ಥರು ಬಿಜೆಪಿಯಲ್ಲಿದ್ದಾರೆ.

ನರೇಂದ್ರ ಮೋದಿ ಆರ್‌ಎಸ್‌ಎಸ್‌ನವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಎಸ್‌‌ಎಸ್‌ನವರಲ್ಲ. ಬಿ.ಎಸ್. ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದಾಗ ಲಾಟರಿ ಹೊಡೆದು ಮುಖ್ಯಮಂತ್ರಿ ಆಗಿ ಬಿಟ್ಟರು. ಅವರನ್ನೂ‌ ಕಿತ್ತು ಹಾಕಲು ಈಶ್ವರಪ್ಪ ಮಾತನಾಡುತ್ತಿದ್ದಾನೆ ಎಂದು ಟೀಕಿಸಿದರು.

ಈ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಯನ್ನು‌ ಸೋಲಿಸಬೇಕು. ಕಾಂಗ್ರೆಸ್​ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲ್ಲಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್​​, ಎನ್.ಎ. ಹ್ಯಾರಿಸ್, ಮುಖಂಡರಾದ ಅಶೋಕ ಪಟ್ಟಣ, ವಿಶ್ವಾಸ ವೈದ್ಯ, ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಪಕ್ಷದ ಗ್ರಾಮಾಂತರ ‌ಜಿಲ್ಲಾ ಘಟಕದ ಅಧ್ಯಕ್ಷ ‌ವಿನಯ ನಾವಲಗಟ್ಟಿ ಇದ್ದರು.

ಇದನ್ನೂ ಓದಿ: ಬೆಳಗಾವಿ ಚಳಿಗಾಲ ಅಧಿವೇಶನ: ವಾಸ್ತವ್ಯ, ಆಹಾರ, ಪ್ರಯಾಣ ಭತ್ಯೆಗೆ ಬಹುಪಾಲು ಖರ್ಚು-ವೆಚ್ಚ ಕಡಿವಾಣಕ್ಕೆ ಒತ್ತು

ABOUT THE AUTHOR

...view details