ಚಿಕ್ಕೋಡಿ : ಆಪರೇಷನ್ ಕಮಲದ ಮೂಲಕ ಹುಕ್ಕೇರಿ ಪುರಸಭೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಚುನಾವಣೆಯ ಕೊನೆಗಳಿಗೆಯಲ್ಲಿ ಭಾರೀ ಹೈಡ್ರಾಮ ನಡೆದು, ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸುವಂತಾಯಿತು.
ಹುಕ್ಕೇರಿ ಪುರಸಭೆಯಲ್ಲಿ ಆಪರೇಶನ್ ಕಮಲ ಯಶಸ್ವಿ : ಬಿಜೆಪಿ ತೆಕ್ಕೆಗೆ ಆಡಳಿತ - Hukkeri Municipal Congress Members joined BJP
ಹುಕ್ಕೇರಿಯಲ್ಲಿ 8 ಜನ ಬಿಜೆಪಿ ಹಾಗೂ 12 ಜನ ಕಾಂಗ್ರೆಸ್ ಪಕ್ಷದಿಂದ ಪುರಸಭೆಗೆ ಆಯ್ಕೆಯಾಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಸ್ಟರ್ ಪ್ಲಾನ್ನಂತೆ ನಾಲ್ಕು ಜನ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು 23 ಜನ ಪುರಸಭೆ ಸದಸ್ಯರ ಪೈಕಿ 8 ಜನ ಬಿಜೆಪಿ ಹಾಗೂ 12 ಜನ ಕಾಂಗ್ರೆಸ್ ಪಕ್ಷದಿಂದ ಪುರಸಭೆಗೆ ಆಯ್ಕೆಯಾಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಸ್ಟರ್ ಪ್ಲಾನ್ನಂತೆ ನಾಲ್ಕು ಜನ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಅಣ್ಣಪ್ಪಾ ಪಾಟೀಲಗೆ ಅಧ್ಯಕ್ಷ ಹಾಗೂ ಪಕ್ಷೇತರ ಸದಸ್ಯ ಆನಂದ ಗಂಧ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ಹುಕ್ಕೇರಿ ಪುರಸಭೆಯಲ್ಲಿ ಆಪರೇಶನ್ ಕಮಲ ಯಶಸ್ವಿಯಾಗಿದ್ದು, ಪುರಸಭೆಯ ಆಡಳಿತ ಬಿಜೆಪಿ ಪಾಲಾಗಿದೆ.