ಬೆಳಗಾವಿ: ನಗರದ ಜೋಶಿ ನರ್ಸಿಂಗ್ ಹೋಮ್ ವೈದ್ಯರ ಎಡವಟ್ಟಿನಿಂದಾಗಿ ಯುವಕನೋರ್ವ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ಇಲ್ಲಿನ ಕಲಮೇಶ್ವರ ನಗರದ ಪರುಶರಾಮ ಮಲ್ಲಪ್ಪ ಲೋಕರೆ ಎಂಬಾತ ಕಳೆದ ಫೆ.21ರಂದು ಹೊಟ್ಟೆ ನೋವಿನಿಂದ ಮಾರುತಿ ಗಲ್ಲಿಯಲ್ಲಿರುವ ಜೋಶಿ ನರ್ಸಿಂಗ್ ಹೋಮ್ಗೆ ಚಿಕಿತ್ಸೆಗೆಂದು ದಾಖಲಾಗಿದ್ದ.
ಈ ವೇಳೆ ಅಲ್ಲಿನ ವೈದ್ಯರು ಸರಿಯಾಗಿ ಪರೀಕ್ಷೆ ನಡೆಸದೇ ಏಕಾಏಕಿ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ ರೋಗಿಯ ಕುಟುಂಬಸ್ಥರ ಬಳಿ ಆಸ್ಪತ್ರೆಯವರು 25 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾರೆ. ಹಣ ತುಂಬಿಸಿಕೊಂಡ ಮಾರನೇ ದಿನವೇ ಆತನನ್ನು ಡಿಸ್ಚಾರ್ಜ್ ಮಾಡಿದ್ದಾರೆ.
ಇತ್ತ ರೋಗಿಯನ್ನು ಮನೆಗೆ ಕರೆದುಕೊಂಡ ಬಂದ ನಂತರ, ಆಪರೇಷನ್ ಆಗಿದ್ದ ಜಾಗದಲ್ಲಿ ಮಲ-ಮೂತ್ರ ಹೊರ ಬರಲು ಆರಂಭವಾಗಿದೆ. ತಕ್ಷಣವೇ ಕುಟುಂಬಸ್ಥರು ಜೋಶಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಈ ವೇಳೆ ಆಸ್ಪತ್ರೆ ವೈದ್ಯರು ಬೇರೆಯದ್ದೇ ಹೇಳಿದ್ದಾರೆ. ರೋಗಿಗೆ ಕ್ಯಾನ್ಸರ್ 4ನೇ ಸ್ಟೇಜ್ನಲ್ಲಿದೆ. ಹೀಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರಂತೆ.