ಕರ್ನಾಟಕ

karnataka

ETV Bharat / state

ಅ.2ರಂದು ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟನೆ : ಸತೀಶ್​​ ಜಾರಕಿಹೊಳಿ - ಗಾಂಧಿ ಜಯಂತಿ

ಗಾಂಧೀಜಿ ಜಯಂತಿಯವರ ದಿನದಂದು ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Opening of Training Center at Gotak Taluk Ghataprabha
ಅ.2ರಂದು ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟನೆ : ಸತೀಶ್​​ ಜಾರಕಿಹೊಳಿ

By

Published : Sep 15, 2020, 6:20 PM IST

Updated : Sep 15, 2020, 7:02 PM IST

ಬೆಳಗಾವಿ : ಅ.2ರಂದು ಮಹಾತ್ಮಾ ಗಾಂಧೀಜಿ ಜಯಂತಿಯವರ ದಿನದಂದು ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸೇವಾದಳದ ಮೂಲಕ ಗಾಂಧೀಜಿ, ನೆಹರು ಹಾಗೂ ಕಾಂಗ್ರೆಸ್‍ನ ವಿಚಾರಧಾರೆಗಳ ಕುರಿತು ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಅ.2ರಂದು ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟನೆ : ಸತೀಶ್​​ ಜಾರಕಿಹೊಳಿ

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಘಟಪ್ರಭಾದಲ್ಲಿ ಸೇವಾದಳದ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿತ್ತು. ಆದ್ರೆ, ಆಗ ಅದು ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಿಸಲಾಗುತ್ತಿದ್ದು ಈಗಾಗಲೇ ಕಟ್ಟಡ ಪೂರ್ಣಗೊಂಡಿದೆ. ಹೀಗಾಗಿ ಗಾಂಧೀಜಿ ಜಯಂತಿಯಂದು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವೇಳೆ ಸೇವಾದಳದ ಎಲ್ಲ ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಸೇವಾದಳವನ್ನು ಭವಿಷ್ಯದಲ್ಲಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಕಾಂಗ್ರೆಸ್ ಪ್ರದೇಶ ಮಹಿಳಾ ಸೇವಾದಳದ ರಾಜ್ಯಾಧ್ಯಕ್ಷೆ ಕಲ್ಪನಾ ಜೋಷಿ, ಜಿಲ್ಲಾಧ್ಯಕ್ಷೆ ಅನ್ನಪೂರ್ಣಾ ಅಸೂರಕರ್, ಜಯಶ್ರೀ ಮಾಳಗಿ ಇದ್ದರು.

Last Updated : Sep 15, 2020, 7:02 PM IST

ABOUT THE AUTHOR

...view details