ಕರ್ನಾಟಕ

karnataka

ETV Bharat / state

ನಿರ್ದಿಷ್ಟ ರೋಗಿಗಳನ್ನು ಬಿಟ್ಟು ಮತ್ಯಾರಿಗೂ ಮಹಾರಾಷ್ಟ್ರಕ್ಕೆ ತೆರಳಲು ಅನುಮತಿಯಿಲ್ಲ.. - Chikkodi in Belgaum district

ಕೇವಲ ಡಯಾಲಿಸಸ್, ಹೃದಯ ಸಂಬಂಧಿತ ಕಾಯಿಲೆ, ಡೆಲಿವರಿ ಹಾಗೂ ಕ್ಯಾನ್ಸರ್‌ ರೋಗಿಗಳನ್ನು ಮಾತ್ರ ಬಿಡಲಾಗುವುದು.

Only people with severe health issue are allowed to go Maharashtra
ನಿರ್ಧಿಷ್ಟ ರೋಗಿಗಳನ್ನು ಬಿಟ್ಟು ಮತ್ಯಾರಿಗೂ ಮಹಾರಾಷ್ಟ್ರಕ್ಕೆ ತೆರಳಲು ಅನುಮತಿಯಿಲ್ಲ: ಪ್ರಮೀಳಾ ದೇಶಪಾಂಡೆ

By

Published : Jun 12, 2020, 9:44 PM IST

Updated : Jun 13, 2020, 2:02 PM IST

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದಲ್ಲಿ ಕೊರೊನಾ ಹಾವಳಿ ಅಧಿಕವಿರುವ ಕಾರಣ ತೀವ್ರ ಆರೋಗ್ಯ ಸಮಸ್ಯೆಯಿದ್ದವರು ಮಾತ್ರ ರಾಜ್ಯದಿಂದ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಬಹುದು ಎಂದು ಕಾಗವಾಡ ತಹಶೀಲ್ದಾರ್‌ ಪ್ರಮೀಳಾ ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ನಿರ್ಧಿಷ್ಟ ರೋಗಿಗಳನ್ನು ಬಿಟ್ಟು ಮತ್ಯಾರಿಗೂ ಮಹಾರಾಷ್ಟ್ರಕ್ಕೆ ತೆರಳಲು ಅನುಮತಿಯಿಲ್ಲ: ಪ್ರಮೀಳಾ ದೇಶಪಾಂಡೆ

ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಕೊಂಚ ಜಾಸ್ತಿಯೇ ಇದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಿಸಿದೆ. ಹೀಗಾಗಿ ಕರ್ನಾಟಕ - ಮಹಾರಾಷ್ಟ್ರ ಗಡಿಯಲ್ಲಿರುವ ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಾಹನಗಳು ತೆರಳುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕೇವಲ ಡಯಾಲಿಸಸ್, ಹೃದಯ ಸಂಬಂಧಿತ ಕಾಯಿಲೆ, ಡೆಲಿವರಿ ಹಾಗೂ ಕ್ಯಾನ್ಸರ್‌ ರೋಗಿಗಳನ್ನು ಮಾತ್ರ ಬಿಡಲಾಗುವುದು ಎಂದು ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಹೇಳಿದರು.

Last Updated : Jun 13, 2020, 2:02 PM IST

ABOUT THE AUTHOR

...view details