ಕರ್ನಾಟಕ

karnataka

ETV Bharat / state

ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ ಬಿಸಿ: ರುಚಿಯಾದ ಅಡುಗೆಯಿಂದ ವಿದ್ಯಾರ್ಥಿಗಳು ವಂಚಿತ - Onion prices hikes effect to the BISIYUTA plan

ಈರುಳ್ಳಿ ಬೆಲೆ ಏರಿಕೆಯಿಂದ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ, Onion price hike is effect to the school children's meals
ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ

By

Published : Dec 15, 2019, 10:41 PM IST

ಚಿಕ್ಕೋಡಿ: ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಈರುಳ್ಳಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಸರ್ಕಾರ ನೀಡುವ ಹಣದಲ್ಲಿ ಈರುಳ್ಳಿ ಕೊಳ್ಳಲಾಗದೆ ಹಾಗೇ ಈರುಳ್ಳಿ ಇಲ್ಲದೆ ಅಡುಗೆ ಕೂಡ ಮಾಡಲಾಗದೆ ಶಿಕ್ಷಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬಿಸಿಯೂಟ ಸಮಸ್ಯೆ ಎದುರಾಗಿದೆ. ಮಾಡುವ ಅಡುಗೆಯಲ್ಲಿ ಈರುಳ್ಳಿ ಪ್ರಮಾಣ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ರುಚಿಯಾದ ಅಡುಗೆ ಸಿಗುತ್ತಿಲ್ಲವಂತೆ.

ಮಕ್ಕಳ ಬಿಸಿಯೂಟಕ್ಕೂ ತಟ್ಟಿದ ಈರುಳ್ಳಿ ಬೆಲೆ ಏರಿಕೆ ಬಿಸಿ

ಇದು ಈ ಒಂದು ಶಾಲೆಯ ಕಥೆಯಲ್ಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿ ಶಾಲೆಯಲ್ಲೂ ಇದೇ ರೀತಿಯ ತೊಂದರೆ ಉಂಟಾಗಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details