ಚಿಕ್ಕೋಡಿ :ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಕಾಣೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ನಡೆದಿದೆ.
ಚಿಕ್ಕೋಡಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ಮಹಿಳೆ ನಾಪತ್ತೆ - undefined
ಶಿರ್ಪೆವಾಡಿ ಗ್ರಾಮದಿಂದ ಸಹೋದರನ ಜೊತೆ ಗಂಡನ ಮನೆಗೆ ಬರುವ ವೇಳೆ ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ.
![ಚಿಕ್ಕೋಡಿಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ಮಹಿಳೆ ನಾಪತ್ತೆ](https://etvbharatimages.akamaized.net/etvbharat/images/768-512-3040983-thumbnail-3x2-gfhnmjpg.jpg)
ನಾಪತ್ತೆಯಾಗಿರುವ ಮಹಿಳೆ ಮತ್ತು ಮೂವರು ಮಕ್ಕಳು
ಪೂಜಾ ಸಚಿನ ಪಾಟೀಲ್, ಮಕ್ಕಳಾದ ಸಮೀಕ್ಷಾ(8), ಸಮೃದ್ಧಿ(6) ಮತ್ತು ಸಿದ್ಧಿ(2) ಕಾಣೆಯಾದವರು. ಶಿರ್ಪೆವಾಡಿ ಗ್ರಾಮದಿಂದ ಸಹೋದರ ಸಂತೋಷನೊಂದಿಗೆ ತನ್ನ ಗಂಡನ ಮನೆಯಾದ ಯರನಾಳ ಗ್ರಾಮದ ಕಡೆಗೆ ಬರುವ ವೇಳೆ ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗುತ್ತಿದೆ.
ಪೂಜಾ ಅವರನ್ನು ತವರು ಮನೆಯಿಂದ ಗಂಡನ ಮನೆ ಯರನಾಳ ಗ್ರಾಮಕ್ಕೆ ಬಿಡಲು ಸಹೋದರ ಸಂತೋಷ ಬಸ್ ನಿಲ್ದಾಣದವರೆಗೆ ಬಂದಿದ್ದಾರೆ. ಅಲ್ಲಿಂದ ಪೂಜಾ ಮಕ್ಕಳೊಂದಿಗೆ ಕಾಣೆಯಾಗಿದ್ದಾಳೆ ಎಂದು ಸಹೋದರ ಸಂತೋಷ ದೂರು ಸಲ್ಲಿಸಿದ್ದಾರೆ. ಈ ಕುರಿತು ನಿಪ್ಪಾಣಿ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.