ಬೆಳಗಾವಿ: ಪವಿತ್ರ ರಂಜಾನ್ ಮಾಸದಲ್ಲಿ 6 ವರ್ಷದ ಬಾಲಕಿ ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಕೈಗೊಂಡಿದ್ದು, ಇಂದು ಪೂರ್ಣಗೊಳಿಸಿದ್ದಾಳೆ.
ಗೋಕಾಕ್ ನಗರದ ಬಾಂಬೆ ಚಾಳ್ನ ನಿವಾಸಿ ಐಷಾ ಮುಲ್ಲಾ, ರಂಜಾನ್ ಮಾಸದಲ್ಲಿ ಒಂದು ತಿಂಗಳ ವ್ರತ ಪಾಲಿಸಿ ಗಮನ ಸೆಳೆದಿದ್ದಾಳೆ.

ಯುಕೆಜಿ ಓದುತ್ತಿರುವ ಐಷಾ, ಕಳೆದ ವರ್ಷವೂ ರಂಜಾನ್ ವೇಳೆ ಒಂದು ದಿನ ಉಪವಾಸ ಆಚರಿಸಿದ್ದಳು. ಆದರೆ, ಈ ವರ್ಷ ಮನಸಾರೆಯಾಗಿ ರಂಜಾನ್ ಮಾಸದ ಮೊದಲ ದಿನದಿಂದ ನಿನ್ನೆಯವರೆಗೆ ಉಪವಾಸ ಆಚರಿಸಿದ್ದಾಳೆ. ಪ್ರತಿದಿನ ನಸುಕಿನ ಜಾವ 4ಗಂಟೆಗೆ ತಂದೆ-ತಾಯಿ ಜೊತೆಗೇ ಏಳುತ್ತಿದ್ದ ಬಾಲಕಿ ಐಷಾ, ಮನೆಯವರೊಂದಿಗೆ ಪ್ರಾರ್ಥನೆ ಸಲ್ಲಿಸಿ ತಿಂಗಳ ಕಾಲ ಉಪವಾಸ ಮಾಡಿದ್ದಾಳೆ.
ಆಟ ಆಡುವ ವಯಸ್ಸಿನಲ್ಲಿ ತಿಂಗಳ ಕಾಲ ಉಪವಾಸ ವ್ರತ ಪೂರ್ಣಗೊಳಿಸಿರುವ ಬಾಲಕಿಯನ್ನು ನೋಡಿ ಚಾಳ್ನ ಮುಸ್ಲಿಂ ಬಾಂಧವರು ಹೆಮ್ಮೆಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕಿ ತಂದೆ ಜಾವೀದ್ ಮುಲ್ಲಾ, ಮಗಳ ಬಗ್ಗೆ ನನಗೆ ಮಾತ್ರ ಅಲ್ಲ, ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಇಡೀ ಬಡಾವಣೆ ಜನರೂ ನನ್ನ ಮಗಳ ಬಗ್ಗೆ ಹೆಮ್ಮೆ ಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದಿದ್ದಾರೆ.