ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ; ಲಕ್ಷಕ್ಕೂ ಅಧಿಕ ಲೀಟರ್ ಹಾಲು ರಸ್ತೆಪಾಲು - belagavi accident

ಹಾಲಿನ ವಾಹನ ಪಲ್ಟಿಯಾಗಿ 1 ಲಕ್ಷಕ್ಕೂ ಅಧಿಕ ಲೀಟರ್ ಹಾಲು ವ್ಯರ್ಥವಾಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

one lakh liter milk wasted due to accident
ಹಾಲಿನ ವಾಹನ ಪಲ್ಟಿ

By ETV Bharat Karnataka Team

Published : Nov 18, 2023, 1:52 PM IST

Updated : Nov 18, 2023, 4:12 PM IST

ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ವಾಹನ ಪಲ್ಟಿಯಾದ ಪರಿಣಾಮ 1 ಲಕ್ಷಕ್ಕೂ ಅಧಿಕ ಲೀಟರ್ ಹಾಲು ರಸ್ತೆ ಪಾಲಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ವಾಹನ ಪಲ್ಟಿ

ಚಾಲಕ ಅಪಾಯದಿಂದ ಪಾರು:ನಗರದ ಮಿಲಿಟರಿ ಮಹಾದೇವ ಟೆಂಪಲ್ ಬಳಿಯ ಕಾಂಗ್ರೆಸ್ ರಸ್ತೆಯಲ್ಲಿ, ಎದುರಿಗೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಹಾಲಿನ ವಾಹನ ಪಲ್ಟಿಯಾಗಿದೆ. ಪರಿಣಾಮ ಹಾಲಿನ ಕ್ಯಾನ್​​ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅದೃಷ್ಟವಶಾತ್ ಚಾಲಕನಿಗೆ ಹೆಚ್ಚೇನೂ ತೊಂದರೆಯಾಗಿಲ್ಲ. ಸಣ್ಣ-ಪುಟ್ಟ ಗಾಯಗಳಾಗಿವೆ.

ವಾಹನ ಪಲ್ಟಿ

1 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ರಸ್ತೆಪಾಲು:ನಡು ರಸ್ತೆಯಲ್ಲೇ ಹಾಲಿನ ವಾಹನ ಪಲ್ಟಿಯಾದ ಹಿನ್ನೆಲೆ 1 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ರಸ್ತೆ ತುಂಬಾ ಹರಡಿತು. ಈ ಹಾಲು ಯಾವ ಡೈರಿಗೆ ಸೇರಿದ್ದು, ಎಲ್ಲಿಗೆ ಕಳುಹಿಸಲಾಗುತ್ತಿತ್ತು ಎಂಬುದರ ಮಾಹಿತಿ ನಿರೀಕ್ಷಿಸಲಾಗಿದೆ. ಅಪಘಾದ ಸಂಭವಿಸಿದ ಹಿನ್ನೆಲೆ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಆಗಿ ವಾಹನ ಸವಾರರು ಪರದಾಡಿದರು. ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.

ಮತ್ತೊಂದು ಅಪಘಾತ ಪ್ರಕರಣ: ಜಾರ್ಖಾಂಡ್​ನಲ್ಲಿ ಭೀಕರ ವಾಹನ ಅಪಘಾತ ಸಂಭವಿಸಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಮದುವೆ ಸಮಾರಂಭಕ್ಕೆ ಸಂಬಂಧಿಸಿದ ಗಾಡಿ ಅಪಘಾತಕ್ಕೊಳಗಾಗಿ 6 ಮಂದಿ ಕೊನೆಯುಸಿರೆಳೆದಿರುವ ಘಟನೆ ಜಾರ್ಖಾಂಡ್​ನ ಗಿರಿದಿಹ್​ನಲ್ಲಿ ಸಂಭವಿಸಿದೆ. ಮುಫಸಿಲ್​ ಪೊಲೀಸ್ ಸ್ಟೇಷನ್​​ ವ್ಯಾಪ್ತಿಯ ಬಾಗ್ಮಾರಾ ಪ್ರದೇಶದ ಬಳಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, 6 ಮಂದಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ :ಮದುವೆ ಮುಗಿಸಿ ಹಿಂತಿರುಗುವ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಕಾರು; 6 ಮಂದಿ ಸಾವು

ಕೊನೆಯುಸಿರೆಳೆದ 6 ಮಂದಿ: ಮದುವೆ ಮೆರವಣಿಗೆ ಮುಗಿಸಿ ಬರುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಐವರು ಮೃತಪಟ್ಟಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ದುರಾದೃಷ್ಟವಶಾತ್​ ಚಿಕಿತ್ಸೆ ವೇಳೆ ಓರ್ವರು ಮೃತಪಟ್ಟ ಹಿನ್ನೆಲೆ ಸಾವಿನ ಸಂಖ್ಯೆ 6ಕ್ಕೆ ಏರಿತು.

ಇದನ್ನೂ ಓದಿ :'ದಕ್ಷಿಣ ಗಾಜಾದಿಂದ ಪಲಾಯನ ಮಾಡಿ': ಪ್ಯಾಲೆಸ್ಟೈನಿಯರಿಗೆ ಎಚ್ಚರಿಕೆ ನೀಡಿದ ಇಸ್ರೇಲ್​

ನುಜ್ಜುಗುಜ್ಜಾದ ಕಾರು: ಕಾರು ಬಹಳ ಸ್ಪೀಡ್​ನಲ್ಲಿತ್ತು. ವೇಗದ ಚಾಲನೆಯೇ ಈ ಭೀಕರ ಘಟನೆಗೆ ಕಾರಣ ಎನ್ನಲಾಗಿದೆ. ಗಾಡಿ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಗಾಡಿ ಮರಕ್ಕೆ ಡಿಕ್ಕಿ ಹೊಡೆದಿದೆ. ವಾಹನದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಅಪಘಾತಕ್ಕೊಳಗಾದ ಕಾರಿನಲ್ಲಿ ಸುಮಾರು 10 ಮಂದಿ ಇದ್ದರು ಎಂಬ ಮಾಹಿತಿ ಇದೆ.

Last Updated : Nov 18, 2023, 4:12 PM IST

ABOUT THE AUTHOR

...view details