ಅಥಣಿ(ಬೆಳಗಾವಿ): ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಬಳವಾಡ ಕ್ರಾಸ್ ಬಳಿ ನಡೆದಿದೆ.
ಬೈಕ್ಗಳ ಮುಖಾಮುಖಿ ಡಿಕ್ಕಿ; ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ - ಅಥಣಿ ಅಪಘಾತ ಸುದ್ದಿ
ಅಥಣಿ ತಾಲೂಕಿನ ಬಳವಾಡ ಕ್ರಾಸ್ ಬಳಿ ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿದ್ದಾನೆ. ಅಥಣಿ ತಾಲೂಕಲ್ಲಿ ಈ ದುರ್ಘಟನೆ ನಡೆದಿದೆ.
ಬೈಕ್
ಅಥಣಿ ತಾಲೂಕು ಶಿರಹಟ್ಟಿ ಗ್ರಾಮದ ಲೋಕಣ್ಣಾ ಈಟಿ (60) ಮೃತ ವ್ಯಕ್ತಿ.ಕಟಗೇರಿ ಗ್ರಾಮದ ಮಹೇಶ ಹಿರೇಮಠ (40) ಗಂಭೀರವಾಗಿ ಗಾಯಗೊಂಡಿದ್ದು, ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಥಣಿ ಕಡೆಯಿಂದ ಲೋಕಣ್ಣಾ ಈಟಿ ಬರುವ ಸಂದರ್ಭದಲ್ಲಿ ಎದುರಿಗೆ ಬಳವಾಡ ಕ್ರಾಸ್ ಕಡೆಯಿಂದ ಮಹೇಶ ಆಗಮಿಸುತ್ತಿರುವ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Jul 1, 2020, 8:22 PM IST