ಅಥಣಿ :ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಹಾಸಿಗೆ ಒಗೆಯಲು ಹೋಗಿ ಕೃಷ್ಣಾ ನದಿ ಪಾಲಾಗಿರುವ ನಾಲ್ಕು ಜನ ಸಹೋದರರಲ್ಲಿ ಓರ್ವನ ಶವ ಪತ್ತೆಯಾಗಿದೆ. ಪರಶುರಾಮ ಗೋಪಾಲ ಬನಸೋಡೆ (24) ಎಂಬಾತನ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರು ಸಹೋದರರ ಮೃತದೇಹಗಳ ಹುಡುಕಾಟಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಪ್ರಯತ್ನ ಮಾಡುತ್ತಿದೆ.
ಒಂದು ದಿನದಿಂದ ಸಹೋದರರ ಹುಡುಕಾಟಕ್ಕೆ ತಾಲೂಕು ಆಡಳಿತ ಹಾಗೂ ಎನ್‌ಡಿಆರ್‌ಎಫ್ ಮತ್ತು ಪಕ್ಕದ ರಾಜ್ಯ ಮಹಾರಾಷ್ಟ್ರದ ಸ್ಕೂಬಾ ಡೈವಿಂಗ್ ತಂಡದಿಂದ ಶೋಧ ಕಾರ್ಯ ಮುಂದುವರೆಸಲಾಗಿದೆ.