ಬೆಳಗಾವಿ:ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ ನೋಡಲು ಹೋದ ಅಜ್ಜಿ, ಕಾಲು ಜಾರಿ ನೀರು ಪಾಲಾದ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪ್ರವಾಹ ನೋಡಲು ಹೋದ ಅಜ್ಜಿ ನೀರು ಪಾಲು - Flood
ಮಳೆಯಿಂದ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿ ನೋಡಲು ಹೋದ ವೃದ್ಧೆಯೊಬ್ಬರು ಕಾಲುಜಾರಿ ನೀರು ಪಾಲಾದ ಘಟನೆ ನಡೆದಿದೆ.
ಪ್ರವಾಹ ನೋಡಲು ಹೋದ ಅಜ್ಜಿ ನೀರು ಪಾಲು
ಮಲಪ್ರಭಾ ನದಿ ನೀರಿನ ಮಟ್ಟ ಹೆಚ್ಚಾಗಿದ್ದು ಖಾನಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ತಾಲೂಕಿನ ಹೊರವಲಯದಲ್ಲಿ ನದಿ ನೀರು ವೀಕ್ಷಣೆ ಮಾಡಲು ಹೋದಾಗ ಸುಶೀಲಾ ಬೋಗಾರ (85) ವರ್ಷದ ಅಜ್ಜಿಯ ಕಾಲು ಜಾರಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ವೃದ್ದೆಗಾಗಿ ಶೋಧಕಾರ್ಯ ನಡೆಯುತ್ತಿದ್ದು. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.