ಚಿಕ್ಕೋಡಿ:ಕಳೆದ ಮೂರು ದಿನದ ಹಿಂದೆ ತೋಟಕ್ಕೆ ಹೋಗುವುದಾಗಿ ಹೇಳಿದ್ದ ವೃದ್ಧ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ.
ನಡುಗಡ್ಡೆಯಾಗಿದ್ದ ತೋಟದ ವಸತಿಗೆ ಹೋಗಿದ್ದ ವೃದ್ಧ ಶವವಾಗಿ ಪತ್ತೆ - ಅಥಣಿ ಪೊಲೀಸ್ ಠಾಣಾ ವ್ಯಾಪ್ತಿ
ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ ಎಂಬ ವೃದ್ಧ ಇಂದು ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಲಾಲಸಾಬ್ ಮುಲ್ಲಾ
ಮಹೇಶವಾಡಗಿ ಗ್ರಾಮದ ಲಾಲಸಾಬ್ ಮುಲ್ಲಾ (69) ಕೃಷ್ಣಾ ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದಲೂ ಲಾಲಸಾಬಗಾಗಿ ಆತನ ಮನೆಯವರು ಹುಡುಕಾಡುತ್ತಿದ್ದರು.
ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.