ಕರ್ನಾಟಕ

karnataka

ETV Bharat / state

ಅಶ್ಲೀಲ ಮೆಸೇಜ್​​​​ ಕಳುಹಿಸಿದ ಶಿಕ್ಷಕನಿಗೆ ಥಳಿತ.. ಚಪ್ಪಲಿ ಹಿಡಿದು ಗೂಸಾ ಕೊಟ್ಟ ನರ್ಸ್​​..! - ನರ್ಸ್​

ದೇಗಾಂವ ಸರ್ಕಾರಿ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲು ಬಂದಾಗ ಶಿಕ್ಷಕ ಸುರೇಶ ಚವಲಗಿ ನರ್ಸ್ ಮೊಬೈಲ್ ನಂಬರ್ ಪಡೆದಿದ್ದರು. ಬಳಿಕ ನರ್ಸ್ ವಾಟ್ಸ್​ಆ್ಯಪ್​ ನಂಬರ್​​​​ಗೆ ಶಿಕ್ಷಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನಂತೆ.

nurse-burst-out-on-school-master-for-sending-bad-messages
ಆಶ್ಲೀಲ ಮೆಸೇಜ್​​​​ ಕಳುಹಿಸಿದ ಶಿಕ್ಷಕನಿಗೆ ಥಳಿತ

By

Published : Aug 4, 2021, 7:48 PM IST

Updated : Aug 4, 2021, 8:31 PM IST

ಬೆಳಗಾವಿ:ನರ್ಸ್​​​ಗೆಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನಿಗೆ ನರ್ಸ್ ಸೇರಿ ಕುಟುಂಬಸ್ಥರು ಶಾಲೆಗೆ ನುಗ್ಗಿ ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ‌ ದೇಗಾಂವ ಗ್ರಾಮದಲ್ಲಿ ನಡೆದಿದೆ.

ದೇಗಾಂವ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸುರೇಶ್ ಚವಲಗಿಗೆ ಕುಟುಂಬಸ್ಥರು ಗೂಸಾ ನೀಡಿದ್ದಾರೆ. ಬೈಲೂರು ಸರ್ಕಾರಿ ಆಸ್ಪತ್ರೆಯ ನರ್ಸ್‌ಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಎಂದು ಆರೋಪಿಸಿ ನರ್ಸ್ ಚಪ್ಪಲಿ ಏಟು ನೀಡಿದ್ದಾರೆ.

ಅಶ್ಲೀಲ ಮೆಸೇಜ್​​​​ ಕಳುಹಿಸಿದ ಶಿಕ್ಷಕನಿಗೆ ಥಳಿತ

ದೇಗಾಂವ ಸರ್ಕಾರಿ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲು ಬಂದಾಗ ಶಿಕ್ಷಕ ಸುರೇಶ ಚವಲಗಿ ನರ್ಸ್ ಮೊಬೈಲ್ ನಂಬರ್ ಪಡೆದಿದ್ದರು. ಬಳಿಕ ಅವರ ವಾಟ್ಸ್​​ಆ್ಯಪ್​ ನಂಬರ್​​​​ಗೆ ಶಿಕ್ಷಕ ಅಶ್ಲೀಲ ಸಂದೇಶ ಕಳಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ನರ್ಸ್ ಶಾಲೆಗೆ ನುಗ್ಗಿ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓದಿ:ಜಮೀನು ವಿಚಾರದಲ್ಲಿ ಮಹಿಳೆ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ, ಆರೋಪಿ ಬಂಧನ

Last Updated : Aug 4, 2021, 8:31 PM IST

ABOUT THE AUTHOR

...view details