ಬೆಳಗಾವಿ :ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏಳಕ್ಕೆ ಏರಿದಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಜಿಲ್ಲೆಯ ರಾಯಭಾಗ ಮೂಲದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮತ್ತೆ ನಾಲ್ವರಿಗೆ ಕೊರೊನಾ ಸೋಂಕು.. ಬೆಳಗಾವಿಯಲ್ಲಿ ಪೀಡಿತರ ಸಂಖ್ಯೆ-7ಕ್ಕೆ ಏರಿಕೆ.. - 4 Corona Positive Again in Belgaum
ನಾಲ್ವರ ಪೈಕಿ ಮೂವರು ಮಹಿಳೆಯರು, ಓರ್ವ ಪುರುಷನಿಗೆ ಪಾಸಿಟಿವ್ ಎಂದು ತಿಳಿದು ಬಂದಿದೆ. 147ನೇ ಸೋಂಕಿತ ವ್ಯಕ್ತಿ 36 ವರ್ಷದ ಮಹಿಳೆ, 148ನೇ ಸೋಂಕಿತ ವ್ಯಕ್ತಿ 40 ವರ್ಷ ಪುರುಷ, 149ನೇ ಸೋಂಕಿತ ವ್ಯಕ್ತಿ 67 ವರ್ಷದ ವೃದ್ಧೆ ಹಾಗೂ 150ನೇ ಸೋಂಕಿತ ವ್ಯಕ್ತಿ 41 ವರ್ಷದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ.
ಬೆಳಗಾವಿ

ಈ ನಾಲ್ವರು ಮಾರ್ಚ್ 20ರಂದು ದೆಹಲಿಯಿಂದ ಬೆಳಗಾವಿಗೆ ಆಗಮಿಸಿದ್ದರು. ಎಲ್ಲರೂ ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ್ದರು. ಮಾರ್ಚ್ 13ರಿಂದ ಮಾರ್ಚ್ 18ರವರೆಗೂ ದೆಹಲಿಯಲ್ಲಿದ್ದರು ಎಂದು ತಿಳಿದು ಬಂದಿದೆ.