ಕರ್ನಾಟಕ

karnataka

ETV Bharat / state

ಬೆತ್ತಲಾಗಿ ಬೈಕ್ ರೈಡ್ ಮಾಡಿದ ಯುವತಿ ಸುಳಿವು ಪತ್ತೆ: ಬೆಳಗಾವಿ ಕಮಿಷನರ್​ ಸ್ಪಷ್ಟನೆ - Belgaum City Police Commissioner

ಎಲ್ಲಡೆ ಚರ್ಚೆಗೆ ಗ್ರಾಸವಾಗಿದ್ದ ಬೆಳಗಾವಿ ಯುವತಿಯೊಬ್ಬಳ ಬೆತ್ತಲೆ ಬೈಕ್ ರೈಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಯುವತಿಯ ಸುಳಿವು ಸಿಕ್ಕಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಲೋಕೇಶ ಕುಮಾರ್

By

Published : Aug 19, 2019, 5:21 PM IST

ಬೆಳಗಾವಿ: ಬೆತ್ತಲೆ ಬೈಕ್ ರೈಡ್ ಮಾಡಿದ ಯುವತಿಯ ಬಗ್ಗೆಸುಳಿವು ಸಿಕ್ಕಿದೆ ಎಂದು‌ ಮಹಾನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿ, ಅಂದು ಬೈಕ್ ನಲ್ಲಿದ್ದ ಯುವಕ ಹಾಗೂ ಬೆತ್ತಲೆಯಾಗಿದ್ದ ಯುವತಿಯ ಸುಳಿವು ದೊರೆತಿದೆ. ಆದರೆ ನಮಗೆ ಇನ್ನೂ ಖಚಿತ ಆಗಬೇಕು, ಪ್ರಕರಣದ ತನಿಖೆ ಮುಂದುವರೆಯುತ್ತಿದೆ ಎಂದರು.

ಯುವತಿ ಬೆತ್ತಲೆಯಾಗಿ ಬೈಕ್ ರೈಡ್ ಮಾಡಿದನ್ನು ನೋಡಿದ ಹಲವರನ್ನು ವಿಚಾರಿಸಲಾಗಿದೆ. ಆದರೆ ಅವರು ಈ ಸಂಬಂಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಪ್ರಕರಣದ ಸಂಬಂಧ ಇಂದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಪೊಲೀಸ್ ಆಯುಕ್ತ ಲೋಕೇಶ ಕುಮಾರ್

ಹೆಚ್ಚಿನ ಓದಿಗಾಗಿ :ಬೆಟ್‌ ಕಟ್ಟಿ ಬೆತ್ತಲೆಯಾಗೇ ಯುವತಿಯ ಬೈಕ್‌ ರೈಡ್‌! ಗಸ್ತು ತೀವ್ರಗೊಳಿಸಲು ಬೆಳಗಾವಿಗರ ಆಗ್ರಹ

ಬೆತ್ತಲಾಗಿ ಯುವತಿಯ ಬೈಕ್​ ರೈಡ್​ ಪ್ರಕರಣ: ಪೊಲೀಸರಿಂದ ಸಿಸಿಟಿವಿ ಪರಿಶೀಲನೆ

ಬೆತ್ತಲೆಯಾಗಿ ಬೈಕ್ ರೈಡ್ ಮಾಡಿದ ಯುವತಿ ಸಿಕ್ಕ ಬಳಿಕವೇ ಆಕೆ ಡ್ರಗ್ಸ್ ಸೇವಿಸಿ ಬೆತ್ತಲೆಯಾಗಿದ್ದಳಾ ಅಥವಾ ಬೆಟ್ ಕಟ್ಟಿ ರೀತಿ ಮಾಡಿದ್ಲಾ ಎಂಬುವುದರ ಗೊತ್ತಾಗಲಿದೆ. ತನಿಖೆ ನಡೆಸಿ ತಪ್ಪಿತಸ್ಥರನ್ನು ಕಂಡು ಹಿಡಿಯುತ್ತೇವೆ. ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆಯೂ ನಡೆಯುತ್ತಿದೆ. ಪ್ರತ್ಯಕ್ಷದರ್ಶಿಗಳನ್ನು ಸಂಪರ್ಕಿಸಿ ಘಟನೆ ನಡೆದ ಜಾಗವನ್ನುಹುಡುಕುತ್ತೇವೆ. ತಪ್ಪಿತಸ್ಥರನ್ನು ಕಂಡು ಹಿಡಿಯುವುದು ನಮ್ಮ ಜವಬ್ದಾರಿ ಎಂದು ಹೇಳಿದರು.

ABOUT THE AUTHOR

...view details