ಚಿಕ್ಕೋಡಿ:ಇಂದಿನ ಸರ್ಕಾರ ಮಾತ್ರವಲ್ಲದೆ ಹಿಂದಿನ ಎಲ್ಲಾ ಸರ್ಕಾರಗಳು ಡ್ರಗ್ಸ್ ದಂಧೆಗೆ ಪುಷ್ಟಿ ನೀಡಿವೆ. ಈಗ ಡ್ರಗ್ಸ್ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ರಾಜ್ಯ ಅಷ್ಟೇ ಅಲ್ಲದೇ ದೇಶದ ತುಂಬೆಲ್ಲಾ ಡ್ರಗ್ಸ್ ನೆಟ್ವರ್ಕ್ ಬೆಳೆದಿದೆ. ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲೂ ಡ್ರಗ್ಸ್ ದಂಧೆ ಇದೆ ಎಂದು ಹೇಳುವ ಮೂಲಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಡ್ರಗ್ಸ್ ದಂಧೆಗೆ ಇಂದಿನ ಸರ್ಕಾರ ಮಾತ್ರವಲ್ಲದೆ, ಹಿಂದಿನ ಸರ್ಕಾರಗಳಲ್ಲೂ ಪುಷ್ಟಿ ಸಿಕ್ಕಿದೆ: ಸತೀಶ್ ಜಾರಕಿಹೊಳಿ - drugs case
ಡ್ರಗ್ಸ್ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಇದಕ್ಕೆ ಈಗಿನ ಸರ್ಕಾರವಲ್ಲದೆ, ಹಿಂದಿನ ಸರ್ಕಾರಗಳು ಪುಷ್ಟಿ ನೀಡಿವೆ. ಇದು ಸಮಾಜವನ್ನು ಹಂತ ಹಂತವಾಗಿ ಬಲಿ ಪಡೆಯುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಡಿಕಲ್ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳೇ ಡ್ರಗ್ಸ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಈಗ ಇದು ದೇಶ ವ್ಯಾಪಿ ಹಬ್ಬಿದೆ. ಹಾಗಾಗಿ ಪೊಲೀಸ್ ಇಲಾಖೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಟಿ ಸಂಜನಾ ಜೊತೆ ಶಾಸಕ ಜಮೀರ್ ಹೆಸರು ಕೇಳಿಬಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಜನಾ ಜೊತೆ ಅವರಿಗೆ ಸಂಪರ್ಕ ಕಲ್ಪಿಸುವುದು ಸರಿ ಅಲ್ಲ. ಡ್ರಗ್ಸ್ ಸೇವನೆ ಮಾಡೋದರಲ್ಲಿ, ಈ ದಂಧೆಯಲ್ಲಿ ಜಮೀರ್ ಇಲ್ಲ. ಹೀಗಾಗಿ ಅವರ ಜೊತೆ ಹೋಲಿಕೆ ಮಾಡೋದು ತಪ್ಪು, ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ಡ್ರಗ್ಸ್ ಅನ್ನುವುದು ಉಗ್ರಗಾಮಿಗಳಿಗಿಂತಲೂ ಅಪಾಯಕಾರಿ, ಇದು ಸಮಾಜವನ್ನ ಹಂತ ಹಂತವಾಗಿ ಬಲಿ ಪಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.