ಕರ್ನಾಟಕ

karnataka

ETV Bharat / state

ನಾವು ಗಡುವು ಕೊಡುವ ಸ್ವಾಮೀಜಿ ಅಲ್ಲ, ಮೀಸಲಾತಿ ಕೊಡಿಸುವ ಸ್ವಾಮೀಜಿ : ವಚನಾನಂದ ಶ್ರೀ - There has been demand for several years of reservation of Panchamsali society 2A

ಪಂಚಮಸಾಲಿ ಸಮಾಜದಲ್ಲಿ ಇನ್ನೂ ಹಲವು ಪೀಠಗಳು ಸ್ಥಾಪನೆ ಆದರೂ ಯಾವುದೇ ತೊಂದರೆಯಿಲ್ಲ ಎಂದು ಶ್ರೀಗಳು ತಿಳಿಸಿದರು.ಪಂಚಮಸಾಲಿ ಪೀಠಗಳ ನಡುವೆ ಮತ್ತು ಯಾರ ನಡುವೆಯೂ ಭಿನ್ನಾಭಿಪ್ರಾಯವಿಲ್ಲ. ಸಮಾಜದ ಏಳಿಗೆಗೆ ಸ್ವಾಮೀಜಿಗಳು ಇರುತ್ತಾರೆ ಎಂದು ತಿಳಿಸಿದರು..

vachanananda sri
ಹರಿಹರ ಪಂಚಮಸಾಲಿ ಸಮಾಜದ ಜಗದ್ಗುರು ವಚನಾನಂದ ಸ್ವಾಮೀಜಿ

By

Published : Mar 1, 2022, 4:52 PM IST

ಬೆಳಗಾವಿ :ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ಹಲವಾರು ವರ್ಷಗಳ ಬೇಡಿಕೆ ಇದೆ. ಬೇಡಿಕೆಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಹರಿಹರ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಭರವಸೆ ನೀಡಿದರು.

2ಎ ಮೀಸಲಾತಿ ಕುರಿತಂತೆ ಹರಿಹರ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿರುವುದು..

ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಆಡದೆ ಮಾಡುವವನು ರೂಢಿಯೊಳು ಉತ್ತಮನು ಎನ್ನುತ್ತಾರೆ. ಅದರಂತೆ ಆದಷ್ಟು ಬೇಗನೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವಂತೆ ಮಾಡಲಾಗುವುದು.

ಇದರಲ್ಲಿ ಯಾವುದೇ ಸಂಶಯವಿಲ್ಲ. ಮಠಗಳು, ಸ್ವಾಮೀಜಿಗಳು ಹೆಚ್ಚಾದರೆ ಸಮಾಜಕ್ಕೆ ಒಳ್ಳೆಯದು. ಪಂಚಮಸಾಲಿ ಸಮಾಜದಲ್ಲಿ ಇನ್ನೂ ಹಲವು ಪೀಠಗಳು ಸ್ಥಾಪನೆ ಆದರೂ ಯಾವುದೇ ತೊಂದರೆಯಿಲ್ಲ ಎಂದು ಶ್ರೀಗಳು ತಿಳಿಸಿದರು.

ಪಂಚಮಸಾಲಿ ಪೀಠಗಳ ನಡುವೆ ಮತ್ತು ಯಾರ ನಡುವೆಯೂ ಭಿನ್ನಾಭಿಪ್ರಾಯವಿಲ್ಲ. ಸಮಾಜದ ಏಳಿಗೆಗೆ ಸ್ವಾಮೀಜಿಗಳು ಇರುತ್ತಾರೆ ಎಂದು ತಿಳಿಸಿದರು. ಹಾಗೆ ನಾನು ಗಡುವು ಕೊಡುವ ಸ್ವಾಮೀಜಿ ಅಲ್ಲ, ಮೀಸಲಾತಿ ಕೊಡಿಸುವ ಸ್ವಾಮೀಜಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ:ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ಟೀಕಿಸಿದ ಕೇಸರಿ ಪಡೆ

For All Latest Updates

TAGGED:

ABOUT THE AUTHOR

...view details