ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ ನಿಲ್ಲದ ವರ್ಷಧಾರೆಯ ಅಬ್ಬರ; ರೈತರಿಗೆ ಟೆನ್ಶನ್‌ - non stop rain in belagavi district

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

non-stop-rain-in-belagavi-district-chikkodi

By

Published : Sep 25, 2019, 12:37 PM IST

ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಗಡಿಭಾಗದ ರೈತರಿಗೆ ತೊಂದರೆಯಾಗಿದೆ.

ಎರಡನೇ ದಿನಕ್ಕೆ ಕಾಲಿಟ್ಟ ಮಳೆ

ಚಿಕ್ಕೋಡಿ, ರಾಯಬಾಗ, ಕಾಗವಾಡ ಅಥಣಿ ಭಾಗದಲ್ಲಿ ಮುಂದುವರೆದ ಮಳೆಯಿಂದ ಜನರಿಗೆ ಅದ್ರಲ್ಲೂ ರೈತಾಪಿ ವರ್ಗಕ್ಕೆ ತೀವ್ರ ಕಿರಿಕಿರಿಯಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ಮಳೆ ತಲೆನೋವು ತಂದಿಟ್ಟಿದೆ. ಇನ್ನೇನು ಬೆಳೆದು ನಿಂತ ಬೆಳೆಗಳನ್ನು ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ಜಡಿಮಳೆ ಸುರಿಯುತ್ತಿದೆ. ಹೀಗಾಗಿ ಕೈಗೆ ಸಿಕ್ಕ ತುತ್ತು ಬಾಯಿಗೆ ಬರುತ್ತಾ ಇಲ್ವೋ ಅನ್ನೋ ಚಿಂತೆ ಗಡಿಭಾಗದ ಅನ್ನದಾತನದ್ದು.

ಈ ವೇಳೆಗಾಗಲೇ ಬೆಳೆದ ಬೆಳೆಗಳೆಲ್ಲವನ್ನು ಕಟಾವು‌ ಮಾಡಿ ಬಿಸಿಲಿಗೆ ಒಣಗುವುದಕ್ಕೆ ಹಾಕಲಾಗುತ್ತಿತ್ತು. ಆದ್ರೆ, ಅನಿರೀಕ್ಷಿತ ಮಳೆ ತೊಡಕುಂಟುಮಾಡಿದೆ.

ABOUT THE AUTHOR

...view details